ನರೇಂದ್ರ ಮೋದಿ ಜೀವನಚರಿತ್ರೆ ನಿಷೇಧಕ್ಕೆ ಆಗ್ರಹ

Update: 2019-03-16 16:08 GMT

ಪಣಜಿ, ಮಾ. 16: ಲೋಕಸಭಾ ಚುನಾವಣೆ ಸಂದರ್ಭ ಮತದಾರರ ಮೇಲೆ ಪ್ರಭಾವ ಬೀರುವ ಉದ್ದೇಶವನ್ನು ಹೊಂದಿರುವುದರಿಂದ ನರೇಂದ್ರ ಮೋದಿ ಕುರಿತ ಜೀವನಚರಿತ್ರೆಯನ್ನು ಬಿಡುಗಡೆ ಮಾಡಬಾರದು ಎಂದು ಕಾಂಗ್ರೆಸ್‌ನ ವಿದ್ಯಾರ್ಥಿ ಘಟಕದ ಗೋವಾದ ಎನ್‌ಎಸ್‌ಯುಐ ಚುನಾವಣಾ ಆಯೋಗವನ್ನು ಆಗ್ರಹಿಸಿದೆ.

ಪಕ್ಷಗಳಿಗೆ ಪ್ರಚಾರಕ್ಕೆ ಅವಕಾಶ ನೀಡದಿರುವ ಚುನಾವಣಾ ಮೌನದ ಅವಧಿ ಎಂದು ಹೇಳಲಾದ ಮತದಾನಕ್ಕಿಂತ ಮುಂಚಿನ 48 ಗಂಟೆಗಳ ಕಾಲ ಈ ಚಲನಚಿತ್ರಕ್ಕೆ ನಿಷೇಧ ಹೇರಬೇಕು ಎಂದು ಮನವಿ ಆಗ್ರಹಿಸಿದೆ.

ಮತದಾನಕ್ಕಿಂತ ಎರಡು ದಿನಕ್ಕಿಂತ ಮುನ್ನ ಚುನಾವಣಾ ಮೌನದ ಸಮಯದಲ್ಲಿ ರಾಜ್ಯದ ಚಿತ್ರಮಂದಿರಗಳಲ್ಲಿ ಚಲನಚಿತ್ರ ಪ್ರದರ್ಶನವನ್ನು ನಿಷೇಧಿಸಬೇಕು ಎಂದು ಗೋವಾದ ಎನ್‌ಎಸ್‌ಯುಐ ಪತ್ರದಲ್ಲಿ ಆಗ್ರಹಿಸಿದೆ. ಅಲ್ಲದೆ, ಪ್ರಧಾನಿ ನರೇಂದ್ರ ಮೋದಿ ಅವರು ಸ್ಪರ್ಧಿಸುವ ಕ್ಷೇತ್ರದಲ್ಲಿ ಈ ಚಲನಚಿತ್ರ ಪ್ರದರ್ಶನವನ್ನು ನಿಷೇಧಿಸಬೇಕು ಎಂದು ಅದು ಆಗ್ರಹಿಸಿದೆ.

ಒಮುಂಗ್ ಕುಮಾರ್ ನಿರ್ದೇಶನದ ಈ ಚಿತ್ರ ಪ್ರಧಾನಿ ನರೇಂದ್ರ ಮೋದಿ ಅವರ ಬಯೋಪಿಕ್. ಬೊಮಾನ್ ಇರಾನಿ, ವಿವೇಕ್ ಒಬೆರಾಯ್ ಹಾಗೂ ಇತರರು ಈ ಚಿತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರ ಎಪ್ರಿಲ್ 12ರಂದು ಬಿಡುಗಡೆಯಾಗುವ ನಿರೀಕ್ಷೆ ಇದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News