ಏಶ್ಯನ್ ಚಾಂಪಿಯನ್‌ಶಿಪ್‌ನಿಂದ ಹಿಂದೆ ಸರಿದ ಮೇರಿ ಕೋಮ್

Update: 2019-03-16 18:22 GMT

ಹೊಸದಿಲ್ಲಿ, ಮಾ.16: ಲೆಜೆಂಡರಿ ಬಾಕ್ಸಿಂಗ್ ಪಟು ಮೇರಿ ಕೋಮ್ ಮುಂಬರುವ ಮಹತ್ವದ ಟೂರ್ನಿಗಳಿಗೆ ಸಿದ್ಧವಾಗುವ ಉದ್ದೇಶದಿಂದ ಏಶ್ಯನ್ ಚಾಂಪಿಯನ್‌ಶಿಪ್ ಬಾಕ್ಸಿಂಗ್‌ನಿಂದ ಹೊರಗುಳಿಯುವುದಾಗಿ ಹೇಳಿದ್ದು, ಅವರ ಅನುಪಸ್ಥಿತಿಯಲ್ಲಿ ಸೋನಿಯಾ ಚಹಾಲ್ 20 ಸದಸ್ಯರ ಭಾರತ ಮಹಿಳಾ ಬಾಕ್ಸಿಂಗ್ ತಂಡವನ್ನು ಮುನ್ನಡೆಸಲಿದ್ದಾರೆ. ಈ ಟೂರ್ನಿಯು ಬ್ಯಾಂಕಾಂಕ್‌ನಲ್ಲಿ ಎ.16ರಿಂದ 27 ರವರೆಗೆ ನಡೆಯಲಿದೆ.

ಆರು ಬಾರಿಯ ವಿಶ್ವ ಚಾಂಪಿಯನ್ ಮೇರಿ, ಈ ವರ್ಷದ ಅಂತ್ಯದಲ್ಲಿ ನಡೆಯುವ ವಿಶ್ವ ಚಾಂಪಿಯನ್‌ಶಿಪ್‌ಕಡೆಗೆ ಗಮನ ನೀಡುವ ಉದ್ದೇಶದಿಂದ ಏಶ್ಯನ್ ಚಾಂಪಿಯನ್‌ಶಿಪ್‌ನಿಂದ ಹೊರಗುಳಿಯುತ್ತಿದ್ದಾರೆ. ಅವರ ಅನುಪಸ್ಥಿತಿಯಲ್ಲಿ ವಿಶ್ವ ಚಾಂಪಿಯನ್‌ಶಿಪ್‌ನ ಬೆಳ್ಳಿ ಪದಕ ವಿಜೇತೆ ಸೋನಿಯಾ, ಏಶ್ಯನ್ ಟೂರ್ನಿಯ ಮಾಜಿ ಚಿನ್ನ ವಿಜೇತೆ ಸರಿತಾದೇವಿ ಹಾಗೂ ಮಾಜಿ ವಿಶ್ವ ಜೂನಿಯರ್ ಚಾಂಪಿಯನ್ ನಿಖತ್ ಝರೀನಾ ಭಾರತದ ಸವಾಲನ್ನು ಮುನ್ನಡೆಸಲಿದ್ದಾರೆ. ಇಲ್ಲಿಯ ಇಂದಿರಾಗಾಂಧಿ ಕ್ರೀಡಾಂಗಣದಲ್ಲಿ ನಡೆದ ಮೂರು ದಿನಗಳ ಟ್ರಯಲ್ಸ್ ನಲ್ಲಿ ನೀಡಿದ ಪ್ರದರ್ಶನ ಮೇಲೆ ಪ್ರತಿಭಾವಂತ ಆಟಗಾರ್ತಿಯರನ್ನು ತಂಡಕ್ಕೆ ಆಯ್ಕೆ ಮಾಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News