ನೂರುಲ್ ಹುದಾ ದುಬೈ ಕಿಸೈಸ್ ಕ್ಲಸ್ಟರ್ ವಾರ್ಷಿಕ ಸಭೆ, ಪದಾಧಿಕಾರಿಗಳ ಆಯ್ಕೆ

Update: 2019-03-17 10:21 GMT

ದುಬೈ, ಮಾ. 17: ದಾರುಲ್ ಹುದಾ ಇಸ್ಲಾಮಿಕ್ ವಿಶ್ವ ವಿದ್ಯಾಲಯ ಚೆಮ್ಮಾಡ್ ಇದರ ಅಂಗ ಸಂಸ್ಥೆಯಾದ ಕರ್ನಾಟಕದ ನೂರುಲ್ ಹುದಾ ಇಸ್ಲಾಮಿಕ್ ಅಕಾಡೆಮಿ ಮಾಡನ್ನೂರು ಇದರ ದುಬೈ ಸಮಿತಿ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ಕಿಸೈಸ್ ಕ್ಲಸ್ಟರ್ ವಾರ್ಷಿಕ ಸಭೆ ಮತ್ತು ಪದಾಧಿಕಾರಿಗಳ ಆಯ್ಕೆ ಕಾರ್ಯಕ್ರಮವು ಅಬ್ದುಲ್ ಖಾದರ್ ಹಾಜಿ ಸಂಪ್ಯ ಅಧ್ಯಕ್ಷತೆಯಲ್ಲಿ ಲತೀಫ್ ಆರ್ತಿಗೆರೆ ನಿವಾಸದಲ್ಲಿ ಇತ್ತೀಚೆಗೆ ನಡೆಯಿತು.

ಸುಲೈಮಾನ್ ಮೌಲವಿ ಕಲ್ಲೆಗ ಅವರ ದುವಾದೊಂದಿಗೆ ಆರಂಭವಾದ ಸಭೆಯಲ್ಲಿ ನೂರುಲ್ ಕಿಸೈಸ್ ಸಮಿತಿಯ ಉಪಾಧ್ಯಕ್ಷ ಹೈದರ್ ಅಲಿ ಸಮಿತಿ ನವೀಕರಣದ ಬಗ್ಗೆ ಮಾತನಾಡಿದರು.

ನೂರುಲ್ ಹುದಾ ಯುಎಇ ರಾಷ್ಟ್ರೀಯ ಸಮಿತಿಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಲತೀಫ್ ಕೌಡಿಚ್ಚಾರ್ ಮಾತನಾಡಿ ನೂರುಲ್ ಹುದಾ ವಿದ್ಯಾ ಸಂಸ್ಥೆಯ ಕಿರು ಪರಿಚಯ ಮತ್ತು ಇತ್ತೀಚಿನ ಬೆಳವಣಿಗೆಗಳನ್ನು ವಿವರಿಸಿ, ಸಭೆಯನ್ನು ಉದ್ಘಾಟಿಸಿದರು.

ನೂರುಲ್ ಹುದಾ ಕಿಸೈಸ್ ಸಮಿತಿಯ ಕಾರ್ಯದರ್ಶಿ ಶಂಸುದ್ದೀನ್ ಇಂದುಮೂಲೆ ವಾರ್ಷಿಕ ವರದಿ ಮತ್ತು ಲೆಕ್ಕ ಪತ್ರ ಮಂಡಿಸಿದರು. ಅಧ್ಯಕ್ಷರಾದ ಅಬ್ದುಲ್ ಖಾದರ್ ಹಾಜಿ ಸಂಪ್ಯ ಸಮಿತಿಯ ಪ್ರಸಕ್ತ ಸ್ಥಿತಿಯ ಬಗ್ಗೆ ಮಾತನಾಡಿ, ಹಾಲಿ ಸಮಿತಿಯನ್ನು ವಿಸರ್ಜಿಸಿದರು. ನೂರುಲ್ ಹುದಾ ಯುಎಇ ಸಮಿತಿ ಕಾರ್ಯಾಧ್ಯಕ್ಷ ಅಶ್ರಫ್ ಪರ್ಲಡ್ಕ ನೂರುಲ್ ಯುಎಇ ಮತ್ತು ಅದೀನ ಸಮಿತಿಗಳ ಕಾರ್ಯ ವೈಖರಿಗಳನ್ನು ವಿವರಿಸಿ, ನೂತನ ಸಮಿತಿಯ ಆಯ್ಕೆ ಪ್ರಕ್ರಿಯೆಗೆ ಚಾಲನೆ ನೀಡಿದರು.

ನೂರುಲ್ ಹುದಾ ಕಿಸೈಸ್ ಕ್ಲಸ್ಟರ್ ಪದಾಧಿಕಾರಿಗಳು

ಸಲಹೆಗಾರರಾಗಿ ಅಬ್ದುಲ್ ಅಝೀಝ್ ಸೋಂಪಾಡಿ, ಅಧ್ಯಕ್ಷರಾಗಿ ಅಬ್ದುಲ್ ಖಾದರ್ ಹಾಜಿ ಸಂಪ್ಯ, ಉಪಾಧ್ಯಕ್ಷರು : ಅಬೂಬಕ್ಕರ್ ಮುಂಡೊಳೆ, ಆಸಿಫ್ ಸಿಬಾರ, ಮುಹಮ್ಮದ್ ರಾಫಿ ಕಣ್ಣೂರು, ಸಲೀಂ ಕೋಲ್ಪೆ, ಪ್ರಧಾನ ಕಾರ್ಯದರ್ಶಿಯಾಗಿ ಶಂಸುದ್ದೀನ್ ಇಂದುಮೂಲೆ, ಕೋಶಾಧಿಕಾರಿಯಾಗಿ ಲತೀಫ್ ಆರ್ತಿಗೆರೆ, ಕಾರ್ಯದರ್ಶಿಗಳು : ನವಾಝ್ ಕಟ್ಟತ್ತಾರ್, ಸಿದ್ದೀಕ್ ಈಶ್ವರಮಂಗಿಳ, ಸಂಘಟನಾ ಕಾರ್ಯದರ್ಶಿಯಾಗಿ ಹೈದರ್ ಅಲಿ ಈಶ್ವರಮಂಗಿಳ, ಸಂಚಾಲಕರಾಗಿ ರಿಫಾಯಿ ಗೂನಡ್ಕ, ರಿಯಾಝ್ ಅರಿಯಡ್ಕ, ಆದಂ ಮುಲಾರ್, ಕಾರ್ಯಕಾರಿ ಸಮಿತಿ ಸದಸ್ಯರುಗಳಾಗಿ ರಫೀಕ್ ಎದಿರ್ ತೋಡು, ನೌಫಲ್ ಕಣ್ಣೂರು, ಖಾದರ್ ಪಳ್ಳತ್ತೂರು, ಮೊಹಮ್ಮದ್ ಮೆನಸಿನಕಾಣ ಮೊದಲಾದವರನ್ನು ಆಯ್ಕೆಮಾಡಲಾಯಿತು.

ನೂರುಲ್ ಹುದಾ ದುಬೈ ಸಮಿತಿಯ ಅಧ್ಯಕ್ಷ ಸುಲೈಮಾನ್ ಮೌಲವಿ ಕಲ್ಲೆಗ ಮಾತನಾಡಿ, ವಿದ್ಯಾ ಸಂಸ್ಥೆಯ ಪ್ರಗತಿಗಾಗಿ ಕೆಲಸ ಮಾಡುವುದು ಮತ್ತು ಸಹಾಯ ಮಾಡುವುದರ ಪ್ರಾಧಾನ್ಯತೆಯನ್ನು ವಿವರಿಸಿ ನೂತನ ಸಮಿತಿಗೆ ಶುಭ ಹಾರೈಸಿದರು.

ಸಭೆಯಲ್ಲಿ ಡಿಐಪಿ ಇವಾನ್ಸ್ ಕ್ಲಸ್ಟರ್ ಪ್ರಧಾನ ಕಾರ್ಯದರ್ಶಿ ಶಬೀರ್ ಪಡುಬಿದ್ರೆ, ಸಂಘಟನಾ ಪ್ರಮುಖರಾದ ಇಸ್ಮಾಯಿಲ್ ಕುಂದಾಪುರ,  ಕಿಸೈಸ್ ಕ್ಲಸ್ಟರ್ ಉಪಾಧ್ಯಕ್ಷ ಅಬೂಬಕ್ಕರ್ ಮುಂಡೊಳೆ, ಕಾರ್ಯದರ್ಶಿ ಸಿದ್ದೀಕ್ ಈಶ್ವರಮಂಗಿಳ, ಸವಾದ್ ಇಂದುಮೂಲೆ ಮೊದಲಾದವರು ಉಪಸ್ಥಿತರಿದ್ದರು.

ಅಬ್ದುಲ್ ಅಝೀಝ್ ಸೋಂಪಾಡಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News