ಆದಿತ್ಯನಾಥ್ ರಿಪೋರ್ಟ್ ಕಾರ್ಡ್ ಗೆ ಪ್ರಿಯಾಂಕ ತರಾಟೆ

Update: 2019-03-19 17:15 GMT

ಹೊಸದಿಲ್ಲಿ, ಮಾ. 19: ಉತ್ತರಪ್ರದೇಶ ರಾಜ್ಯ ಸರಕಾರದ ಪ್ರತಿಪಾದನೆಯನ್ನು ಕಟುವಾಗಿ ಟೀಕಿಸಿರುವ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ, ಆದಿತ್ಯನಾಥ್ ರಿಪೋರ್ಟ್ ಕಾರ್ಡ್ ಹಾಗೂ ಆದಿತ್ಯನಾಥ್ ಸರಕಾರದ ವಾಸ್ತವ ಸ್ಥಿತಿ ಭಿನ್ನವಾಗಿದೆ. ಕಳೆದ ಐದು ವರ್ಷಗಳಲ್ಲಿ ಬಿಜೆಪಿ ಏನು ಮಾಡಿದೆ ಎಂಬುದನ್ನು ಹೇಳಬೇಕು ಎಂದಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಿಪೋರ್ಟ್ ಕಾರ್ಡ್ ಪ್ರಸಾರ ಉತ್ತಮವೇ. ಆದರೆ, ಅದು ವಸ್ತು ಸ್ಥಿತಿಗಿಂತ ಭಿನ್ನವಾಗಿದೆ. ನಾನು ಪ್ರತಿ ದಿನ ಜನರನ್ನು ಭೇಟಿಯಾಗುತ್ತಿದ್ದೇನೆ. ಎಲ್ಲ ಜನರು ತೊಂದರೆಯಲ್ಲಿದ್ದಾರೆ ಎಂದು ಅವರು ಹೇಳಿದರು. ಕಾಂಗ್ರೆಸ್ ಅಧಿಕಾರವನ್ನು ಟೀಕಿಸುವುದನ್ನು ನಿಲ್ಲಿಸುವಂತೆ ಹಾಗೂ ಸಾಧನೆಯನ್ನು ಬಹಿರಂಗಗೊಳಿಸುವಂತೆ ಮೋದಿ ಸರಕಾರವನ್ನು ಕೋರಿದ ಪ್ರಿಯಾಂಕಾ ಗಾಂಧಿ ವಾದ್ರಾ, ‘‘70 ವರ್ಷಗಳಲ್ಲಿ ಏನು ಮಾಡಿದಿರಿ ಎಂಬ ವಾದ ಕೂಡ ಮುಕ್ತಾಯದ ದಿನಾಂಕ ಹೊಂದಿದೆ. ಈಗ ಬಿಜೆಪಿಯವರು ಐದು ವರ್ಷಗಳಲ್ಲಿ ಏನು ಮಾಡಿದರು ಎಂಬುದನ್ನು ಹೇಳಬೇಕು’’ ಎಂದು ಅವರು ಹೇಳಿದರು.

 ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ರಾಜ್ಯದಲ್ಲಿ ಒಂದೇ ಒಂದು ಗಲಭೆ ಘಟನೆ ಸಂಭವಿಸಿಲ್ಲ ಎಂದು ಉತ್ತರಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್ ಪ್ರತಿಪಾದನೆಯನ್ನು ಅವರು ತೀಕ್ಷ್ಣವಾಗಿ ಟೀಕಿಸಿದ್ದಾರೆ ಹಾಗೂ ಅವರ ಎರಡು ವರ್ಷದ ಸರಕಾರ ಕ್ರೈಮ್ ಹಾಗೂ ಕ್ರಿಮಿನಲ್‌ಗಳ ಬಗ್ಗೆ ಶೂನ್ಯ ಸಹಿಷ್ಣುತೆ ತೋರಿಸಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News