40 ಸಿಆರ್‌ಪಿಎಫ್ ಯೋಧರ ಹತ್ಯೆಯನ್ನು ಭಾರತ ಮರೆಯದು: ಅಜಿತ್ ದೋವಲ್

Update: 2019-03-19 17:19 GMT

ಗುರುಗ್ರಾಮ, ಮಾ. 19: ಕಳೆದ ತಿಂಗಳು ಪುಲ್ವಾಮದಲ್ಲಿ ನಡೆದ ದಾಳಿಯಲ್ಲಿ ಸಿಆರ್‌ಪಿಎಫ್‌ನ 40 ಯೋಧರು ಹುತಾತ್ಮರಾಗಿರುವುದನ್ನು ಭಾರತ ಎಂದೂ ಮರೆಯಲು ಸಾಧ್ಯವಿಲ್ಲ. ಇದಕ್ಕೆ ಯಾವಾಗ, ಎಲ್ಲಿ ಹಾಗೂ ಹೇಗೆ ಪ್ರತಿಕ್ರಿಯಿಸಬೇಕು ಎಂಬುದನ್ನು ನಮ್ಮ ರಾಷ್ಟ್ರದ ನಾಯಕರು ನಿರ್ಧರಿಸಲಿದ್ದಾರೆ ಎಂದು ರಾಷ್ಟ್ರೀಯ ಭದ್ರತಾ ಸಲಹೆಗಾರ (ಎನ್‌ಎಸ್‌ಎ) ಅಜಿತ್ ದೋವಲ್ ಮಂಗಳವಾರ ಹೇಳಿದ್ದಾರೆ.

ಗುರುಗ್ರಾಮದಲ್ಲಿ ಮಂಗಳವಾರ ಸಿಆರ್‌ಪಿಎಫ್‌ನ 80ನೇ ವಾರ್ಷಿಕ ಪರೇಡ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪುಲ್ವಾಮದಲ್ಲಿ 40 ಯೋಧರು ಹುತಾತ್ಮರಾಗಿ ರುವುದನ್ನು ನಾವು ಮರೆಯಲಾರೆವು. ಇದನ್ನು ದೇಶ ಎಂದಿಗೂ ಮರೆಯದು ಎಂದರು. ನಾವು ಏನು ಮಾಡಬಹುದು, ನಾವು ಯಾವ ದಾರಿ ಅನುಸರಿಸಬಹುದು, ಯಾವ ಕ್ರಮಗಳನ್ನು ಯಾವ ಸಂದರ್ಭದಲ್ಲಿ ತೆಗೆದುಕೊಳ್ಳಬಹುದು ಎಂಬುದನ್ನು ನಿರ್ಧರಿಸಲು ನಮ್ಮ ದೇಶದ ನಾಯಕರು ಸಮರ್ಥರು ಎಂದು ಅವರು ಹೇಳಿದ್ದಾರೆ.

ಏನು ಅಗತ್ಯವಿದೆಯೋ ಅದನ್ನು ಮಾಡಲು ದೇಶ ಸಮರ್ಥವಾಗಿದೆ. ಅದು ಭಯೋತ್ಪಾದಕರ ವಿರುದ್ಧ ಆಗಿರಬಹುದು ಅಥವಾ ನಮಗೆ ನೆರವು ನೀಡುತ್ತಿರುವವರಿಗೆ ಆಗಿರಬಹುದು ಎಂದು ಅವರು ಹೇಳಿದರು. ನಾವು ಭಯೋತ್ಪಾದಕರ ವಿರುದ್ಧ ಹೋರಾಡಲಿದ್ದೇವೆ. ನಮ್ಮಲ್ಲಿ ಧೈರ್ಯವಿದೆ ಹಾಗೂ ಯಾವುದೇ ಬಿಕ್ಕಟ್ಟಿನ ವಿರುದ್ಧ ಹೋರಾಡುವ ಉದ್ದೇಶ ಇದೆ ಎಂದು ದೋವಲ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News