ಅಗ್ರಸ್ಥಾನ ಉಳಿಸಿಕೊಂಡ ವಿರಾಟ್ ಕೊಹ್ಲಿ

Update: 2019-03-20 03:41 GMT

ದುಬೈ, ಮಾ.19: ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ನೂತನವಾಗಿ ಪ್ರಕಟಗೊಂಡಿರುವ ಐಸಿಸಿ ಟೆಸ್ಟ್ ರ್ಯಾಂಕಿಂಗ್‌ನ ದಾಂಡಿಗರ ವಿಭಾಗದಲ್ಲಿ ಅಗ್ರಸ್ಥಾನವನ್ನು ಉಳಿಸಿಕೊಂಡಿದ್ದಾರೆ. ಒಟ್ಟು 922 ರೇಟಿಂಗ್ ಪಾಯಿಂಟ್‌ಗಳನ್ನು ಹೊಂದಿರುವ ಕೊಹಿ,್ಲ ಈ ವರ್ಷದ ಐಸಿಸಿ ವರ್ಷದ ಟೆಸ್ಟ್ ಕ್ರಿಕೆಟಿಗ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ.

ಆಸ್ಟ್ರೇಲಿಯದ ವಿರುದ್ಧದ ಸರಣಿಯಲ್ಲಿ ಅತ್ಯುತ್ತಮ ಪ್ರದರ್ಶನದ ಮೂಲಕ ಮಿಂಚಿದ ಭಾರತದ ಮತ್ತೋರ್ವ ದಾಂಡಿಗ ಚೇತೇಶ್ವರ ಪೂಜಾರ ದಾಂಡಿಗರ ಪಟ್ಟಿಯಲ್ಲಿ 881 ಅಂಕಗಳೊಂದಿಗೆ 3ನೇ ಸ್ಥಾನ ಉಳಿಸಿಕೊಂಡಿದ್ದಾರೆ. ಐಸಿಸಿಯ ಅಗ್ರ 10 ಬೌಲರ್‌ಗಳ ಪಟ್ಟಿಯಲ್ಲಿ ಭಾರತದಿಂದ ಜಡೇಜ ಹಾಗೂ ಅಶ್ವಿನ್ ಮಾತ್ರ ಇದ್ದಾರೆ. ಜಡೇಜ 6ನೇ ಸ್ಥಾನದಲ್ಲಿದ್ದರೆ ಅಶ್ವಿನ್ 10ನೇ ಸ್ಥಾನದಲ್ಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News