ನಟಿ ಪೂಜಾಗಾಂಧಿಯ ಹೋಟೆಲ್ ಬಿಲ್ ಪಾವತಿಸಿದ ಬಿಜೆಪಿ ನಾಯಕ

Update: 2019-03-20 17:13 GMT

ಬೆಂಗಳೂರು, ಮಾ.20: ನಗರದ ಅಶೋಕ ಹೊಟೇಲ್‌ನ ಕೊಠಡಿಯೊಂದಕ್ಕೆ ಚಿತ್ರನಟಿ ಪೂಜಾ ಗಾಂಧಿ, ಬಿಲ್ ಪಾವತಿಸಿಲ್ಲ ಎಂಬ ಆರೋಪ ಕೇಳಿಬಂದ ಬೆನ್ನಲೇ ಬಿಜೆಪಿ ನಾಯಕ ಅನಿಲ್ ಪಿ.ಮೆಣಸಿನಕಾಯಿ ಬುಧವಾರ ಬಾಕಿ ಮೊತ್ತ ನೀಡಿದ್ದಾರೆ ಎನ್ನಲಾಗಿದೆ.

ಪೂಜಾ ಗಾಂಧಿ, ಅನಿಲ್ ಹಾಗೂ ಇವರ ಸಹಚರರು 2016ರ ಏಪ್ರಿಲ್‌ನಿಂದ 2017ರ ಮಾರ್ಚ್‌ವರೆಗೆ ಹೊಟೇಲ್‌ನಲ್ಲಿ ಕೊಠಡಿಯೊಂದನ್ನು ಬಾಡಿಗೆ ಪಡೆದಿದ್ದರು. ಊಟ, ತಿಂಡಿ ಸೇರಿ ಒಟ್ಟು 26.22 ಲಕ್ಷ ರೂ. ಬಿಲ್ ಆಗಿತ್ತು. ಈ ವೇಳೆ ಬರೀ 22.83 ಲಕ್ಷ ಪಾವತಿಸಿದ್ದ ಅವರು, ಇನ್ನೂ, 3.53 ಲಕ್ಷ ರೂ. ಬಾಕಿ ಉಳಿಸಿಕೊಂಡಿದ್ದಾರೆ ಎಂದು ಆರೋಪಿಸಿ ಹೊಟೇಲ್‌ನ ಭದ್ರತಾ ವ್ಯವಸ್ಥಾಪಕ ಸಿ.ಸಿ.ಮುತ್ತಣ್ಣ ಮಾರ್ಚ್ 11ರಂದು ಹೈಗ್ರೌಂಡ್ಸ್ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News