ಪುಲ್ವಾಮ ದಾಳಿ ಹಿಂದೆ ಪಿತೂರಿ, ಸೈನಿಕರನ್ನು ಮತಗಳಿಗಾಗಿ ಹತ್ಯೆಗೈಯಲಾಗಿದೆ

Update: 2019-03-21 15:59 GMT

ಹೊಸದಿಲ್ಲಿ, ಮಾ.21: ಪುಲ್ವಾಮದಲ್ಲಿ ಸೈನಿಕರ ಮೇಲೆ ನಡೆದ ದಾಳಿಗೆ ಸಂಬಂಧಿಸಿ ಕೇಂದ್ರ ಸರಕಾರದ ವಿರುದ್ಧ ಸಮಾಜವಾದಿ ಪಕ್ಷದ ನಾಯಕ ರಾಮ್ ಗೋಪಾಲ್ ಯಾದವ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ದಾಳಿಯ ಹಿಂದೆ ‘ಪಿತೂರಿ’ಯಿದೆ ಎಂದವರು ಆರೋಪಿಸಿದ್ದಾರೆ.

2019ರ ಲೋಕಸಭಾ ಚುನಾವಣೆಯಲ್ಲಿ ಕೇಂದ್ರ ಸರಕಾರ ಬದಲಾದರೆ ಪುಲ್ವಾಮ ಭಯೋತ್ಪಾದಕ ದಾಳಿಯ ಬಗ್ಗೆ ತನಿಖೆ ನಡೆಯಲಿದೆ ಮತ್ತು ‘ದೊಡ್ಡ ಮೀನು’ ಸಿಕ್ಕಿ ಬೀಳಲಿದೆ” ಎಂದರು.

“ಪ್ಯಾರಾ ಮಿಲಿಟರಿ ಪಡೆಗಳು ಸರಕಾರದ ಬಗ್ಗೆ ಅಸಮಾಧಾನ ಹೊಂದಿದೆ. ಸೈನಿಕರನ್ನು ಮತಗಳಿಗಾಗಿ ಹತ್ಯೆಗೈಯಲಾಗಿದೆ. ಜಮ್ಮು ಮತ್ತು ಶ್ರೀನಗರದ ನಡುವೆ ಭದ್ರತಾ ತಪಾಸಣೆಯಿರಲಿಲ್ಲ. ಸಾಮಾನ್ಯ ಬಸ್ ಗಳಲ್ಲಿ ಸೈನಿಕರನ್ನು ಸಾಗಿಸಲಾಗಿದೆ. ಇದರ ಹಿಂದೆ ಪಿತೂರಿಯಿದೆ” ಎಂದವರು ಹೇಳಿದರು.

ಅದೊಂದು ಪಿತೂರಿಯಾಗಿತ್ತು ಎಂದು ಯಾದವರನ್ನು ಉಲ್ಲೇಖಿಸಿ ಸುದ್ದಿಸಂಸ್ಥೆಯು ವರದಿ ಮಾಡಿದೆ.

ಯಾದವ್ ಹೇಳಿಕೆಗೆ ಪ್ರತಿಕ್ರಿಯಿಸಿರುವ ಉತ್ತರ ಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್ ಅವರು,ಘನತೆಯಿಲ್ಲದ ರಾಜಕೀಯಕ್ಕೆ ಯಾದವ ಉದಾಹರಣೆಯಾಗಿದ್ದಾರೆ. ಸಿಆರ್‌ಪಿಎಫ್ ಯೋಧರ ಬಲಿದಾನವನ್ನು ಪ್ರಶ್ನಿಸಿದ್ದಕ್ಕಾಗಿ ಮತ್ತು ಈ ದೇಶದ ಯೋಧರ ನೈತಿಕ ಸ್ಥೈರ್ಯವನ್ನು ಕುಗ್ಗಿಸಿದ್ದಕ್ಕಾಗಿ ಅವರು ಸಾರ್ವಜನಿಕರ ಕ್ಷಮೆ ಯಾಚಿಸಬೇಕು ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News