ಕೆಳ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲು ಸಿದ್ಧ: ಫಿಂಚ್

Update: 2019-03-22 03:28 GMT

ಮೆಲ್ಬೋರ್ನ್, ಮಾ.21: ಪ್ರಭಾವಿ ಆಟಗಾರರಾದ ಸ್ಟಿವ್ ಸ್ಮಿತ್ ಹಾಗೂ ಡೇವಿಡ್ ವಾರ್ನರ್ ತಂಡಕ್ಕೆ ಮರಳಲು ಸಿದ್ಧವಾಗಿರುವಂತೆಯೇ ಆಸ್ಟ್ರೇಲಿಯ ತಂಡದ ನಾಯಕ ಆ್ಯರೊನ್ ಫಿಂಚ್ ತಮ್ಮ ಬ್ಯಾಟಿಂಗ್ ಕ್ರಮಾಂಕದಲ್ಲಿ ಬದಲಾವಣೆ ಮಾಡಿಕೊಳ್ಳಲು ಬಯಸಿದ್ದಾರೆ. ಇಂಗ್ಲೆಂಡ್‌ನಲ್ಲಿ ನಡೆಯುವ ವಿಶ್ವಕಪ್ ಟೂರ್ನಿಯನ್ನು ಗಮನದಲ್ಲಿಟ್ಟುಕೊಂಡು ವಾರ್ನರ್ ಹಾಗೂ ಸ್ಮಿತ್‌ಗೆ ಅಗ್ರ ಕ್ರಮಾಂಕದಲ್ಲಿ ಅವಕಾಶ ಕಲ್ಪಿಸಲು ಫಿಂಚ್ ಕೆಳ ಕ್ರಮಾಂಕದಲ್ಲಿ ಆಡಲು ಬಯಸಿದ್ದಾರೆ ಎಂದು ಕ್ರಿಕೆಟ್ ವೆಬ್‌ಸೈಟ್‌ವೊಂದು ವರದಿ ಮಾಡಿದೆ.

ಇತ್ತೀಚಿನ ದಿನಗಳಲ್ಲಿ ಬ್ಯಾಟಿಂಗ್‌ನಲ್ಲಿ ಲಯ ಕಂಡುಕೊಳ್ಳಲು ಪರದಾಡುತ್ತಿರುವ ಫಿಂಚ್ ಈ ವರ್ಷ ಇಲ್ಲಿಯವರೆಗೆ ಆಡಿದ 8 ಏಕದಿನ ಇನಿಂಗ್ಸ್‌ಗಳಲ್ಲಿ 22.87ರ ಸರಾಸರಿಯಲ್ಲಿ ರನ್ ಗಳಿಸಿದ್ದಾರೆ. ತಂಡದ ಹಿತದೃಷ್ಟಿಯಿಂದ ಯಾವುದೇ ಕ್ರಮಾಂಕದಲ್ಲೂ ತಾನು ಬ್ಯಾಟಿಂಗ್‌ಗೆ ಇಳಿಯಲು ಸಿದ್ಧವಿರುವುದಾಗಿ ಫಿಂಚ್ ಹೇಳಿದ್ದಾರೆ. ಅತ್ಯುತ್ತಮ ಲಯದಲ್ಲಿರುವ ಉಸ್ಮಾನ್ ಖ್ವಾಜಾ ಇತ್ತೀಚೆಗೆ ಭಾರತದ ವಿರುದ್ಧ ನಡೆದ ಏಕದಿನ ಸರಣಿಯಲ್ಲಿ ಮಿಂಚಿದ್ದು, ಫಿಂಚ್ ಸ್ಥಾನಕ್ಕೆ ಪ್ರಬಲ ಪ್ರತಿಸ್ಪರ್ಧಿಯಾಗಿದ್ದಾರೆ.

‘‘ನನಗೆ 6ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲು ಅವಕಾಶ ದೊರೆತರೆ ಅದನ್ನು ಸಮರ್ಥವಾಗಿ ನಿರ್ವಹಿಸುವೆನು. ಅಗ್ರ ಕ್ರಮಾಂಕ, ಮೂರು ಅಥವಾ ನಾಲ್ಕು ಯಾವುದೇ ಸ್ಥಾನವಾದರೂ ನನಗೇನೂ ವ್ಯತ್ಯಾಸ ಕಾಣುವುದಿಲ್ಲ’’ ಎಂದು ಫಿಂಚ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News