ಡೆನ್ಮಾರ್ಕ್ ಬ್ಯಾಡ್ಮಿಂಟನ್ ಆಟಗಾರ ಜೋಕಿಮ್‌ಗೆ ನಿಷೇಧ

Update: 2019-03-22 04:49 GMT

ಕೋಪನ್‌ಹೇಗನ್, ಮಾ.21: ಬೆಟ್ಟಿಂಗ್ ಹಾಗೂ ಅನಿಯಮಿತ ಪಂದ್ಯ ಫಲಿತಾಂಶಕ್ಕೆ ಸಂಬಂಧಿಸಿ ಕ್ರೀಡಾ ನೀತಿ ಸಂಹಿತೆಯನ್ನು ಉಲ್ಲಂಘಿಸಿದ ಆರೋಪದಲ್ಲಿ ಡೆನ್ಮಾರ್ಕ್‌ನ ಬ್ಯಾಡ್ಮಿಂಟನ್ ಆಟಗಾರ ಜೋಕಿಮ್ ಪೆರ್ಸನ್‌ರನ್ನು 18 ತಿಂಗಳ ಕಾಲ ನಿಷೇಧಿಸಲಾಗಿದೆ ಎಂದು ವಿಶ್ವ ಬ್ಯಾಡ್ಮಿಂಟನ್ ಒಕ್ಕೂಟ(ಬಿಡಬ್ಲುಎಫ್)ಗುರುವಾರ ತಿಳಿಸಿದೆ.

 ವಿಶ್ವದ ಮಾಜಿ ನಂ.6ನೇ ಆಟಗಾರ ಜೋಕಿಮ್ ತನ್ನನ್ನು ಸಂಪರ್ಕಿಸಿದವರ ಬಗ್ಗೆ ಮಾಹಿತಿ ನೀಡಲು ವಿಫಲವಾಗಿ ಕ್ರೀಡಾ ಬೆಟ್ಟಿಂಗ್ ನಿಯಮ ಉಲ್ಲಂಘನೆ ಸೇರಿದಂತೆ ಒಟ್ಟು ನಾಲ್ಕು ನೀತಿ ಸಂಹಿತೆ ಉಲ್ಲಂಘಿಸಿದ್ದರು. 35ರ ಹರೆಯದ ಆಟಗಾರನ ಮೇಲೆ ಬಿಡಬ್ಲುಎಫ್ ತನಿಖೆಗೆ ಸಹಕರಿಸಿದ ಆರೋಪವೂ ಇದೆ. ಆಡಳಿತ ಮಂಡಳಿ ವಿನಂತಿಸಿಕೊಂಡಿದ್ದರೂ ಸಂಪೂರ್ಣ ಮಾಹಿತಿಯನ್ನು ಬಹಿರಂಗಪಡಿಸಿರಲಿಲ್ಲ. ಜೋಕಿಮ್‌ಗೆ ಟೂರ್ನಮೆಂಟ್‌ಗಳಲ್ಲಿ ಆಡದಂತೆ ಹಾಗೂ ಕ್ರೀಡೆಯಲ್ಲಿ ಯಾವುದೇ ಆಡಳಿತಾತ್ಮಕ ಕಾರ್ಯಕ್ರಮಗಳನ್ನು ನಡೆಸದಂತೆ ನಿಷೇಧಿಸಲಾಗಿದೆ. ಬಿಡಬ್ಲುಎಫ್‌ಗೆ 4,500 ಡಾಲರ್ ವೆಚ್ಚವನ್ನು ಭರಿಸುವಂತೆ ಜೋಕಿಮ್‌ಗೆ ಆದೇಶಿಸಲಾಗಿದೆ.

ಡೆನ್ಮಾರ್ಕ್ ಬ್ಯಾಡ್ಮಿಂಟನ್ ಆಟಗಾರ ಜೋಕಿಮ್‌ಗೆ ನಿಷೇಧ

ನೀತಿ ಸಂಹಿತೆ ಉಲ್ಲಂಘನೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News