ವೈದ್ಯಕೀಯ ಕೋರ್ಸ್‌ಗೆ ಸೀಟು ಕೊಡಿಸುವುದಾಗಿ ವಂಚನೆ: ಆರೋಪಿ ಬಂಧನ

Update: 2019-03-22 14:48 GMT

ಬೆಂಗಳೂರು, ಮಾ.22: ಡಿ-ಫಾರ್ಮ್ ವೈದ್ಯಕೀಯ ಕೋರ್ಸ್‌ಗೆ ಸೀಟು ಕೊಡಿಸುವುದಾಗಿ ಹಣ ಪಡೆದು ವಂಚಿಸಿದ್ದ ಆರೋಪಿಯನ್ನು ಸಂಜಯನಗರ ಪೊಲೀಸರು ಬಂಧಿಸಿದ್ದಾರೆ.

ನಗರದ ಭೂಪಸಂದ್ರದ ಆರ್‌ಎಂವಿ ಲೇಔಟ್‌ನ ಸೈಯ್ಯದ್ ಮುಹಮ್ಮದ್(56) ಬಂಧಿತ ಆರೋಪಿ ಎಂದು ಪೊಲೀಸರು ತಿಳಿಸಿದ್ದಾರೆ.

ವಿನಾಯಕ್ ಲೇಔಟ್‌ನಲ್ಲಿ ‘ಬಾಕ್ವಿರ್ ಎಕ್ಸಿಮ್’ ಎಂಬ ಮೆಡಿಕಲ್ ಸೀಟ್ ಕನ್ಸಲ್‌ಟೆಂಟ್ ಕಚೇರಿಯನ್ನು ತೆರೆದಿದ್ದ. ಈ ವೇಳೆ ಇರಾನ್ ಮೂಲದ ಸೈಯ್ಯದ್ ಇಸ್ತಕಿ ಎಂಬುವವರನ್ನು ಪರಿಚಯಿಸಿಕೊಂಡಿದ್ದ. ಆಂಧ್ರಪ್ರದೇಶದ ಶ್ರೀನಿವಾಸ್‌ರಾವ್ ಕಾಲೇಜ್ ಆಫ್ ಫಾರ್ಮಸಿ ಕಾಲೇಜಿನಲ್ಲಿ ‘ಡಿ-ಫಾರ್ಮ್ ಕೋರ್ಸಿ’ಗೆ ಸೀಟು ಕೊಡಿಸುವುದಾಗಿ ನಂಬಿಸಿ 8.5 ಲಕ್ಷ ರೂ. ಹಣ ಪಡೆದು ವಂಚಿಸಿದ್ದ ಎನ್ನಲಾಗಿದೆ.

ಈ ಕುರಿತು ಸೈಯ್ಯದ್ ಇಸ್ತಕಿ ದೂರು ನೀಡಿದ್ದ. ದೂರಿನ ಅನ್ವಯ ಆರೋಪಿಯನ್ನು ಬಂಧಿಸಿ ವಿಚಾರಣೆಗೊಳಪಡಿಸಲಾಗಿದೆ. ಹಣ ಪಡೆದುಕೊಂಡಿರುವ ಬಗ್ಗೆ ತಪ್ಪೊಪ್ಪಿಕೊಂಡಿದ್ದಾನೆಂದು ಪೊಲೀಸರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News