ಐಪಿಎಲ್ ಪಾಕ್‌ನಲ್ಲಿ ಪ್ರಸಾರ ಇಲ್ಲ

Update: 2019-03-22 18:45 GMT

ಇಸ್ಲಾಮಾಬಾದ್, ಮಾ.22: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನ 2019ರ ಆವೃತಿಯನ್ನು ಪಾಕಿಸ್ತಾನದಲ್ಲಿ ಪ್ರಸಾರ ಮಾಡುವುದಿಲ್ಲ ಎಂದು ಪಾಕ್ ಮಾಹಿತಿ ಮತ್ತು ಪ್ರಸಾರ ಸಚಿವ ಫವಾದ್ ಅಹ್ಮದ್ ಚೌಧರಿ ಗುರುವಾರ ತಿಳಿಸಿದ್ದಾರೆ.

ಪಾಕಿಸ್ತಾನಿ ಸುದ್ದಿ ವಾಹಿನಿ ಎಆರ್‌ವೈ ನ್ಯೂಸ್ ಜೊತೆ ಈ ಕುರಿತು ಮಾತನಾಡಿದ ಸಚಿವರು, ಸದ್ಯ ಭಾರತದೊಂದಿಗೆ ಉದ್ವಿಗ್ನತೆ ಏರ್ಪಟ್ಟಿರುವ ಕಾರಣ ಐಪಿಎಲ್ ಟಿ20 ಪಂದ್ಯಾವಳಿಯನ್ನು ಪ್ರಸಾರ ಮಾಡಲು ಪಾಕಿಸ್ತಾನ ಅನುಮತಿ ನೀಡುವುದಿಲ್ಲ ಎಂದು ತಿಳಿಸಿದ್ದಾರೆ. ಪಿಎಸ್‌ಎಲ್ ಸಂದರ್ಭದಲ್ಲಿ ಭಾರತೀಯ ಕಂಪೆನಿಗಳು ಮತ್ತು ಸರಕಾರ ಪಾಕಿಸ್ತಾನಿ ಕ್ರಿಕೆಟನ್ನು ನಡೆಸಿಕೊಂಡ ರೀತಿಯನ್ನು ಗಮನಿಸಿದಾಗ ಪಾಕಿಸ್ತಾನದಲ್ಲಿ ಐಪಿಎಲ್ ಪ್ರಸಾರ ಮಾಡುವುದನ್ನು ಸಹಿಸಲು ಸಾಧ್ಯವಿಲ್ಲ ಎಂದು ಚೌದರಿ ಅಭಿಪ್ರಾಯಿಸಿದ್ದಾರೆ. ಪುಲ್ವಾಮ ಆತ್ಮಾಹುತಿ ದಾಳಿಯಲ್ಲಿ 40 ಸಿಆರ್‌ಪಿಎಫ್ ಜವಾನರು ಹುತಾತ್ಮರಾದ ಹಿನ್ನೆಲೆಯಲ್ಲಿ ಫೆಬ್ರವರಿಯಲ್ಲಿ ನಡೆಯುತ್ತಿದ್ದ ಪಾಕಿಸ್ತಾನ ಸೂಪರ್ ಲೀಗ್ 2019 (ಪಿಎಸ್‌ಎಲ್)ರ ಪ್ರಸಾರವನ್ನು ಭಾರತ ತಡೆಹಿಡಿದಿತ್ತು. ಈ ಲೀಗನ್ನು ಪ್ರಸಾರ ಮಾಡುವ ಒಪ್ಪಂದಕ್ಕೆ ಸಹಿ ಹಾಕಿದ್ದ ಐಎಂಜಿ- ರಿಲಾಯನ್ಸ್ ಕೂಡಾ ಒಪ್ಪಂದದಿಂದ ಹಿಂದೆ ಸರಿದಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News