12ನೇ ಆವೃತ್ತಿಯ ಐಪಿಎಲ್: ಚೆನ್ನೈ ಸ್ಪಿನ್ ಬೌಲಿಂಗ್ ದಾಳಿಗೆ ಆರ್‌ಸಿಬಿ ತತ್ತರ

Update: 2019-03-23 16:03 GMT

ಚೆನ್ನೈ, ಮಾ.23: ಹಿರಿಯ ಸ್ಪಿನ್ನರ್ ಹರ್ಭಜನ್ ಸಿಂಗ್ ನೇತೃತ್ವದ ಬೌಲಿಂಗ್ ದಾಳಿಗೆ ಕಂಗಾಲಾದ ವಿರಾಟ್ ಕೊಹ್ಲಿ ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 12ನೇ ಆವೃತ್ತಿಯ ಐಪಿಎಲ್‌ನ ಉದ್ಘಾಟನಾ ಪಂದ್ಯದಲ್ಲಿ 70 ರನ್ ಗಳಿಸಲಷ್ಟೇ ಶಕ್ತವಾಗಿದೆ.

ಶನಿವಾರ ಇಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಆರ್‌ಸಿಬಿ 17.1 ಓವರ್‌ಗಳಲ್ಲಿ 70 ರನ್ ಗಳಿಸಿ ಆಲೌಟಾಗಿದೆ. ಆರ್‌ಸಿಬಿ ಪರ ಆರಂಭಿಕ ಆಟಗಾರ ಪಾರ್ಥಿವ್ ಪಟೇಲ್ 29 ರನ್(35 ಎಸೆತ, 2 ಬೌಂಡರಿ) ಗಳಿಸಿ ಅಗ್ರ ಸ್ಕೋರರ್ ಎನಿಸಿಕೊಂಡರು.

ಹಾಲಿ ಚಾಂಪಿಯನ್ ಚೆನ್ನೈ ಪರ ಹರ್ಭಜನ್ ಸಿಂಗ್ 20 ರನ್‌ಗೆ 3 ವಿಕೆಟ್ ಉರುಳಿಸಿದರು. ಇನ್ನೊರ್ವ ಸ್ಪಿನ್ನರ್ ಇಮ್ರಾನ್ ತಾಹಿರ್ 4 ಓವರ್‌ಗಳಲ್ಲಿ 3 ವಿಕೆಟ್ ಪಡೆದು ಕೇವಲ 9 ರನ್ ನೀಡಿ (3-9) ಹರ್ಭಜನ್‌ಗೆ ಉತ್ತಮ ಸಾಥ್ ನೀಡಿದರು. ರವೀಂದ್ರ ಜಡೇಜ 15 ರನ್‌ಗೆ 2 ವಿಕೆಟ್ ಉಡಾಯಿಸಿದರು.

ನಾಯಕ ವಿರಾಟ್ ಕೊಹ್ಲಿ(6), ಮೊಯಿನ್ ಅಲಿ(9), ಎಬಿಡಿವಿಲಿಯರ್ಸ್(9), ಎಸ್.ದುಬೆ(2),ಗ್ರಾಂಡ್‌ಹೋಮ್(4) ಹಾಗೂ ಸೈನಿ(2)ಎರಡಂಕೆಯ ಸ್ಕೋರ್ ಗಳಿಸಿದರು. ಆಲ್‌ರೌಂಡರ್ ಹೆಟ್ಮೆಯರ್ ಖಾತೆ ತೆರೆಯುವ ಮೊದಲೇ ರನೌಟಾದರು.

.........

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News