ಉ. ಕೊರಿಯ ಮೇಲಿನ ಹೆಚ್ಚುವರಿ ದಿಗ್ಬಂಧನ ಹಿಂದಕ್ಕೆ ಪಡೆದ ಅಮೆರಿಕ

Update: 2019-03-23 18:08 GMT

ವಾಶಿಂಗ್ಟನ್, ಮಾ. 23: ಉತ್ತರ ಕೊರಿಯದ ಮೇಲಿನ ಅಂತರ್‌ರಾಷ್ಟ್ರೀಯ ಒತ್ತಡವನ್ನು ಮತ್ತಷ್ಟು ಬಿಗಿಗೊಳಿಸುವುದಕ್ಕಾಗಿ, ಅಮೆರಿಕದ ಖಜಾನೆ ಇಲಾಖೆಯು ಹೇರಿರುವ ಹೆಚ್ಚುವರಿ ದಿಗ್ಬಂಧನಗಳನ್ನು ಹಿಂದಕ್ಕೆ ಪಡೆಯುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶುಕ್ರವಾರ ಘೋಷಿಸಿದ್ದಾರೆ.

‘‘ಉತ್ತರ ಕೊರಿಯದ ವಿರುದ್ಧ ಈಗಾಗಲೇ ವಿಧಿಸಲಾಗಿರುವ ದಿಗ್ಬಂಧನಗಳಿಗೆ ಹೆಚ್ಚುವರಿಯಾಗಿ ಅಮೆರಿಕದ ಖಜಾನೆ ಇಲಾಖೆಯು ಇಂದು ಇನ್ನಷ್ಟು ದಿಗ್ಬಂಧನಗಳನ್ನು ಘೋಷಿಸಿದೆ. ಆ ಹೆಚ್ಚುವರಿ ದಿಗ್ಬಂಧನಗಳನ್ನು ಹಿಂದೆ ಪಡೆಯುವಂತೆ ನಾನು ಇಂದು ಆದೇಶಿಸಿದ್ದೇನೆ’’ ಎಂದು ಟ್ವೀಟೊಂದರಲ್ಲಿ ಟ್ರಂಪ್ ಹೇಳಿದ್ದಾರೆ.

ಉತ್ತರ ಕೊರಿಯ ತನ್ನ ಪರಮಾಣು ಕಾರ್ಯಕ್ರಮಗಳನ್ನು ತ್ಯಜಿಸುವಂತೆ ಅದರ ಮೇಲೆ ಒತ್ತಡ ಹಾಕುವುದಕ್ಕಾಗಿ ವಿಧಿಸಲಾಗಿರುವ ಅಂತರ್‌ರಾಷ್ಟ್ರೀಯ ದಿಗ್ಬಂಧನಗಳಿಂದ ನುಣುಚಿಕೊಳ್ಳಲು ಆ ದೇಶಕ್ಕೆ ಸಹಾಯ ಮಾಡಿದ ಆರೋಪವನ್ನು ಎದುರಿಸುತ್ತಿರುವ ಎರಡು ಚೀನಾ ಕಂಪೆನಿಗಳನ್ನು ಗುರಿಯಾಗಿಸಿ ದಿಗ್ಬಂಧನಗಳನ್ನು ವಿಧಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News