ಟಿ-20 ವಿಶ್ವಕಪ್ ಬಳಿಕ ಲಸಿತ್ ಮಾಲಿಂಗ ನಿವೃತ್ತಿ

Update: 2019-03-23 19:12 GMT

ಕೊಲಂಬೊ, ಮಾ.23: 2020ರಲ್ಲಿ ನಡೆಯುವ ಐಸಿಸಿ ಟ್ವೆಂಟಿ-20 ವಿಶ್ವಕಪ್ ಟೂರ್ನಿಯ ಬಳಿಕ ಅಂತರ್‌ರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿಯಾಗುವುದಾಗಿ ಶ್ರೀಲಂಕಾದ ವೇಗದ ಬೌಲರ್ ಲಸಿತ್ ಮಾಲಿಂಗ ಹೇಳಿದ್ದಾರೆ. ದಕ್ಷಿಣ ಆಫ್ರಿಕ ವಿರುದ್ಧ ದ್ವಿತೀಯ ಟ್ವೆಂಟಿ-20 ಪಂದ್ಯವನ್ನಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಮಾಲಿಂಗ,‘‘ವಿಶ್ವಕಪ್ ನಂತರ ನನ್ನ ವೃತ್ತಿಬದುಕು ಕೂಡ ಅಂತ್ಯವಾಗಲಿದೆ. ಟಿ-20 ವಿಶ್ವಕಪ್‌ನಲ್ಲಿ ಆಡಬೇಕೆಂಬ ಬಯಕೆಯಿದೆ. ಆ ಬಳಿಕ ವೃತ್ತಿಜೀವನಕ್ಕೆ ತೆರೆ ಎಳೆಯುವೆ’’ ಎಂದರು. ಶ್ರೀಲಂಕಾ ತಂಡ ಶುಕ್ರವಾರ ದ.ಆಫ್ರಿಕ ವಿರುದ್ದ 2ನೇ ಟಿ-20 ಪಂದ್ಯವನ್ನು 16 ರನ್‌ನಿಂದ ಸೋತ ಬಳಿಕ ಮಾಲಿಂಗ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು.

35ರ ಹರೆಯದ ಮಾಲಿಂಗ 29.03ರ ಸರಾಸರಿಯಲ್ಲಿ 218 ಏಕದಿನ ಪಂದ್ಯಗಳಲ್ಲಿ 322 ವಿಕೆಟ್‌ಗಳನ್ನು ಪಡೆದಿದ್ದಾರೆ. ಮಾಲಿಂಗ 72 ಟಿ-20ಯಲ್ಲಿ 97 ವಿಕೆಟ್‌ಗಳನ್ನು ಉರುಳಿಸಿದ್ದಾರೆ. ಚುಟುಕು ಮಾದರಿ ಕ್ರಿಕೆಟ್‌ನಲ್ಲಿ ಗರಿಷ್ಠ ವಿಕೆಟ್ ಪಡೆದಿರುವ ಶಾಹಿದ್ ಅಫ್ರಿದಿ ದಾಖಲೆಯನ್ನು ಸರಿಗಟ್ಟಲು ಇನ್ನು ಒಂದು ವಿಕೆಟ್ ಅಗತ್ಯವಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News