ಗೂಂಡಾ ಕಾಯ್ದೆಯಡಿ ರೌಡಿ ಕುಮಾರ ಸೆರೆ
Update: 2019-03-24 23:25 IST
ಬೆಂಗಳೂರು, ಮಾ.24: ಗಂಭೀರ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಆರೋಪದಡಿ ರೌಡಿ ಕಿರಣ್‌ಕುಮಾರ್ ಅನ್ನು ಗೂಂಡಾ ಕಾಯ್ದೆಯಡಿ ಕೆಂಗೇರಿ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಕೊಲೆ, ಅಪಹರಣ ಸೇರಿದಂತೆ ಗಂಭೀರ ಅಪರಾಧ ಕೃತ್ಯದಲ್ಲಿ ಭಾಗಿಯಾಗಿದ್ದ ರಾಮೋಹಳ್ಳಿಯ ನಿವಾಸಿ ಕಿರಣ್‌ಕುಮಾರ್ ಅನ್ನು ಬಂಧಿಸಲಾಗಿದೆ ಎಂದು ಡಿಸಿಪಿ ರವಿ ಚೆನ್ನಣ್ಣನವರ್ ತಿಳಿಸಿದ್ದಾರೆ.