ಅಶ್ಲೀಲ ಜಾಲತಾಣಗಳಲ್ಲಿ ಯುವತಿಯ ಮೊಬೈಲ್ ನಂಬರ್ ಹಂಚಿಕೆ: ಬಂಧನ

Update: 2019-03-24 18:16 GMT

ಬೆಂಗಳೂರು, ಮಾ.24: ಯುವತಿಯೊಬ್ಬಳ ಮೊಬೈಲ್ ಸಂಖ್ಯೆಯನ್ನು ಅಶ್ಲೀಲ ಜಾಲತಾಣಗಳಲ್ಲಿ ಹಂಚಿಕೆ ಮಾಡಿದ್ದ ಆರೋಪದಡಿ ಯುವಕನೊರ್ವನನ್ನು ಇಲ್ಲಿನ ಯಶವಂತಪುರ ಠಾಣಾ ಪೊಲೀಸರು ಬಂಧಿಸಿದ್ದಾರೆ.

ನಗರದ ನಿವಾಸಿ ರೋಹಿತ್ ಕುಮಾರ್ ಎಂಬಾತ ಬಂಧಿತ ಆರೋಪಿ ಎಂದು ಪೊಲೀಸರು ಹೇಳಿದ್ದಾರೆ.

ರೋಹಿತ್ ಮತ್ತು ಯುವತಿ ಪರಿಚಯಸ್ಥರಾಗಿದ್ದು, ಕೆಲ ದಿನಗಳ ಹಿಂದೆ ಅವರಿಬ್ಬರಿಗೂ ಜಗಳ ನಡೆದಿತ್ತು. ಬಳಿಕ, ಆರೋಪಿ, ಅಶ್ಲೀಲ ಜಾಲತಾಣಗಳಲ್ಲಿ ಯುವತಿಯ ಮೊಬೈಲ್ ಸಂಖ್ಯೆ ಹಂಚಿಕೆ ಮಾಡಿದ್ದ. ಜೊತೆಗೆ, ಫೆ.27ರಂದು ಯುವತಿಯ ಮನೆಗೆ ತೆರಳಿ ಗಲಾಟೆ ಮಾಡಿದ್ದ ಎನ್ನಲಾಗಿದೆ.

ಈ ಬಗ್ಗೆ ನೊಂದ ಯುವತಿ ರೋಹಿತ್ ಕುಮಾರ್ ವಿರುದ್ಧ ಯಶವಂತಪುರ ಠಾಣೆಯಲ್ಲಿ ದೂರು ನೀಡಿದ್ದು, ಇದರ ಅನ್ವಯ ಪೊಲೀಸರು ಆರೋಪಿಯನ್ನು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News