ಮುಂಬೈ ಗೆಲುವಿಗೆ 214 ರನ್ ಗುರಿ

Update: 2019-03-24 18:42 GMT

ಮುಂಬೈ, ಮಾ.24: ರಿಷಭ್ ಪಂತ್(ಔಟಾಗದೆ 78) ಅರ್ಧಶತಕದ ಬೆಂಬಲದಿಂದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಆತಿಥೇಯ ಮುಂಬೈ ಇಂಡಿಯನ್ಸ್ ತಂಡಕ್ಕೆ ಐಪಿಎಲ್‌ನ 3ನೇ ಪಂದ್ಯದ ಗೆಲುವಿಗೆ ಕಠಿಣ ಗುರಿ ನೀಡಿದೆ.

ರವಿವಾರ ಟಾಸ್ ಜಯಿಸಿದ ಮುಂಬೈ ನಾಯಕ ರೋಹಿತ್ ಶರ್ಮಾ ಡೆಲ್ಲಿಯನ್ನು ಬ್ಯಾಟಿಂಗ್‌ಗೆ ಇಳಿಸಿದರು. ಪಂತ್(ಔಟಾಗದೆ 78, 27 ಎಸೆತ, 7 ಬೌಂಡರಿ, 7 ಸಿಕ್ಸರ್),ಇನ್‌ಗ್ರಾಮ್(47,32 ಎಸೆತ) ಹಾಗೂ ಶಿಖರ್ ಧವನ್(43,36 ಎಸೆತ)ಅಮೂಲ್ಯ ಕೊಡುಗೆ ನೆರವಿನಿಂದ ಡೆಲ್ಲಿ 20 ಓವರ್‌ಗಳಲ್ಲಿ 6 ವಿಕೆಟ್‌ಗಳ ನಷ್ಟಕ್ಕೆ 213 ರನ್ ಗಳಿಸಿತು. ಮುಂಬೈನ ಪರ ಮೆಕ್ಲಿನಘನ್(3-40)ಯಶಸ್ವಿ ಬೌಲರ್ ಎನಿಸಿಕೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News