ಬಿಜೆಪಿ ಟೀ-ಶರ್ಟ್‌ಗಳ ಮಾರಾಟದಲ್ಲೇ ತಲ್ಲೀನವಾಗಿದೆ: ಪ್ರಿಯಾಂಕಾ ಗಾಂಧಿ

Update: 2019-03-25 09:18 GMT

ಹೊಸದಿಲ್ಲಿ, ಮಾ.25: ಲೋಕಸಭಾ ಚುನಾವಣೆಯ ಭಾಗವಾಗಿ ‘‘ಬಿಜೆಪಿ ನಾಯಕರು ‘ನಮೋ ಎಗೈನ್’ ಹಾಗೂ ‘ಚೌಕೀದಾರ್’ ಹೆಸರಿನ ಟೀ-ಶಟ್‌ಗಳನ್ನು ನಮೋ ಆ್ಯಪ್‌ನಲ್ಲಿ ಮಾರಾಟ ಮಾಡುವುದರಲ್ಲೇ ತಲ್ಲೀನರಾಗಿದ್ದಾರೆ. ಮತ್ತೊಂದೆಡೆ ಜನರು ತಮ್ಮ ಸಮಸ್ಯೆಯನ್ನು ತಾಳಲಾಗದೆ ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ’’ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಟ್ವೀಟ್ ಮಾಡಿದ್ದಾರೆ.

‘‘ಉತ್ತರಪ್ರದೇಶದಲ್ಲಿ ‘ಶಿಕ್ಷಾ ಮಿತ್ರರ’ ಪರಿಶ್ರಮವನ್ನು ಪ್ರತಿದಿನವೂ ಅವಮಾನಿಸಲಾಗುತ್ತಿದೆ. ನೂರಾರು ಜನರು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿರುವವರ ಮೇಲೆ ಲಾಠಿಚಾರ್ಜ್ ನಡೆಸಲಾಗುತ್ತಿದೆ. ಅವರ ಮೇಲೆ ರಾಷ್ಟ್ರೀಯ ಭದ್ರತಾ ಕಾಯ್ದೆಯನ್ನು ಹೇರಲಾಗುತ್ತಿದೆ’’ ಎಂದು ಉತ್ತರಪ್ರದೇಶದ ಶಿಕ್ಷ ಮಿತ್ರರು ಅಥವಾ ಗುತ್ತಿಗೆ ಶಿಕ್ಷಕರ ಸಮಸ್ಯೆಯನ್ನು ಉಲ್ಲೇಖಿಸಿ ಪ್ರಿಯಾಂಕಾ ಟ್ವೀಟ್ ಮಾಡಿದ್ದಾರೆ.

ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವ ನೂರಾರು ಶಿಕ್ಷಕರು ಉತ್ತರಪ್ರದೇಶದಲ್ಲಿ ಪ್ರತಿಭಟನೆ ನಡೆಸುತ್ತಾ, ಉತ್ತಮ ವೇತನ ಹಾಗೂ ರಾಜ್ಯದಲ್ಲಿ ಹೊಸ ಶಿಕ್ಷಕರ ನೇಮಕಕ್ಕಾಗಿ ಆಗ್ರಹಿಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News