ರಾಸಿಖ್ ಸಲಾಮ್ ವಿಶೇಷ ಆಟಗಾರ ಆಗಬಲ್ಲರು

Update: 2019-03-26 18:37 GMT

ಶ್ರೀನಗರ, ಮಾ.26: ಸ್ವಿಂಗ್ ಎಸೆತಗಳ ಮೇಲೆ ಹಿಡಿತ ಹಾಗೂ ನಿಯಂತ್ರಣ ಹೊಂದಿರುವ ಜಮ್ಮು ಕಾಶ್ಮೀರದ ಯುವ ವೇಗದ ಬೌಲರ್ ರಾಸಿಖ್ ಸಲಾಮ್ ಇನ್ನು ಎರಡು-ಮೂರು ವರ್ಷಗಳಲ್ಲಿ ವಿಶೇಷ ಬೌಲರ್ ಆಗಿ ಹೊರಹೊಮ್ಮಲಿದ್ದಾರೆ ಎಂದು ಭಾರತ ತಂಡದ ಕ್ರಿಕೆಟ್ ಆಟಗಾರ ಯುವರಾಜ್‌ಸಿಂಗ್ ಭವಿಷ್ಯ ನುಡಿದಿದ್ದಾರೆ.

‘‘ರಾಸಿಖ್ ನೆಟ್ಸ್‌ನಲ್ಲಿ ಸ್ವಿಂಗ್ ಎಸೆತಗಳನ್ನು ಹಾಕಿತ್ತಾರೆ. ಅದೇ ಕಾರಣ ನಮ್ಮ ತಂಡದ ದಾಂಡಿಗರು ಅವರ ಬೌಲಿಂಗ್ ಎದುರಿಸಲು ಇಷ್ಟಪಡುತ್ತಾರೆ. ದಿಲ್ಲಿ ವಿರುದ್ಧದ ಪಂದ್ಯದಲ್ಲಿ ಕೊನೆಯ ಎರಡು ಎಸೆತಗಳಲ್ಲಿ ಆತ ಸಿಕ್ಸರ್ ಹಾಗೂ ಬೌಂಡರಿ ಬಿಟ್ಟುಕೊಟ್ಟರೂ ಒಟ್ಟಾರೆ ಬೌಲಿಂಗ್ ಉತ್ತಮವಾಗಿತ್ತು’’ ಎಂದು ಟಿವಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಅವರು ಹೇಳಿದ್ದಾರೆ.

ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ನಡೆದ ಮುಂಬೈ ಇಂಡಿಯನ್ಸ್ ನ ಮೊದಲ ಪಂದ್ಯದಲ್ಲಿ ಯುವರಾಜ್ ಅರ್ಧಶತಕ ಬಾರಿಸಿ ಮಿಂಚಿದ್ದರು. ‘‘ತಾನಾಡಿದ ಪ್ರಥಮ ಐಪಿಎಲ್ ಪಂದ್ಯದಲ್ಲಿ ರಾಸಿಕ್ ಒತ್ತಡವನ್ನು ನಿಭಾಯಿಸುವಲ್ಲಿ ಯಶಸ್ವಿಯಾಗಿದ್ದಾನೆ ಎಂದು ನನಗನಿಸುತ್ತದೆ. ಇನ್ನು 2-3 ವರ್ಷಗಳಲ್ಲಿ ಅವರೊಬ್ಬ ವಿಶೇಷ ಬೌಲರ್ ಆಗಿ ರೂಪುಗೊಳ್ಳುತ್ತಾರೆ ಎಂಬುದು ನನ್ನ ಅಭಿಪ್ರಾಯವಾಗಿದೆ’’ ಎಂದು ಸ್ಫೋಟಕ ಹೊಡೆತಗಳ ಆಟಗಾರ ಯುವರಾಜ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News