ವಿಜ್ಞಾನಿಗಳ ಸಾಧನೆಗೆ ರಾಜಕೀಯ ಬಣ್ಣನೀಡಲು ಪ್ರಧಾನಿಗೆ ಅವಕಾಶ ನೀಡಿದ್ದೇಕೆ?

Update: 2019-03-27 18:02 GMT

ಹೊಸದಿಲ್ಲಿ,ಮಾ.27: ಭಾರತೀಯ ವಿಜ್ಞಾನಿಗಳು ಮಾಡಿರುವ ಸಾಧನೆಗೆ ಚುನಾವಣೆಗೆ ಇನ್ನೇನು ಕೆಲವೇ ದಿನಗಳು ಉಳಿದಿರುವಾಗ ಪ್ರಧಾನಿ ಮೋದಿ ರಾಜಕೀಯ ಬಣ್ಣ ಬಳಿಯಲು ಅವಕಾಶ ನೀಡಿದ್ದಾದರೂ ಯಾಕೆ ಎಂದ ಸಿಪಿಎಂ ಚುನಾವಣಾ ಆಯೋಗವನ್ನು ಪ್ರಶ್ನಿಸಿದೆ.

ಆಯೋಗಕ್ಕೆ ಬರೆದ ಪತ್ರದಲ್ಲಿ ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಮ ಯೆಚೂರಿ ಉಪಗ್ರಹನಿಗ್ರಹ ಆಯುಧ ಎಸ್ಯಾಟನ್ನು ಅಭಿವೃದ್ಧಿಪಡಿಸಿರುವುದಕ್ಕೆ ಭಾರತೀಯ ವಿಜ್ಞಾನಿಗಳನ್ನು ಅಭಿನಂದಿಸಿದ್ದಾರೆ ಮತ್ತು ಈ ಸಾಧನೆ ಮಾಡಿರುವುದನ್ನು ಡಿಆರ್‌ಡಿಒ 2012ರಲ್ಲೇ ಘೋಷಿಸಿತ್ತು ಎಂದು ತಿಳಿಸಿದ್ದಾರೆ.

ಇಂಥ ಯೋಜನೆಗಳನ್ನು ಸಾಮಾನ್ಯವಾಗಿ ಸಂಬಂಧಿತ ವೈಜ್ಞಾನಿಕ ಪ್ರಾಧಿಕಾರಗಳೇ ಘೋಷಿಸುತ್ತವೆ. ಆದರೆ ಈ ಬಾರಿ ಪ್ರಧಾನ ಮಂತ್ರಿ ಈ ಸಾಧನೆಯ ಘೋಷಣೆ ಮಾಡಿದ್ದಾರೆ. ಅದೂ ಕೂಡಾ ಚುನಾವಣೆಯ ಸಮಯದಲ್ಲಿ ಪ್ರಧಾನಿ ಈ ಘೋಷಣೆ ಮಾಡಿದ್ದಾರೆ. ಇದು ನೀತಿ ಸಂಹಿತೆಯ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ಸೀತಾರಾಮ ಯೆಚೂರಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News