ಲಲಿತಾ ಸಿದ್ದಬಸವಯ್ಯ-ಸುರೇಶ್ ನಾಗಲಮಡಿಕೆಗೆ ಬಿಎಂಶ್ರೀ ಪ್ರಶಸ್ತಿ

Update: 2019-03-27 18:13 GMT

ಬೆಂಗಳೂರು, ಮಾ.27: ಸಾಹಿತಿ ಲಲಿತಾ ಸಿದ್ಧಬಸವಯ್ಯ ಹಾಗೂ ವಿಮರ್ಶಕ ಸುರೇಶ ನಾಗಲಮಡಿಕೆಗೆ ಈ ಸಾಲಿನ ಬಿಎಂಶ್ರೀ ಪ್ರತಿಷ್ಠಾನದ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ಪ್ರತಿಷ್ಠಾನ ಕೊಡಮಾಡುವ ಡಾ.ವಿಜಯಾ ಸುಬ್ಬರಾಜ್ ಗಣ್ಯ ಲೇಖಕಿ ಪ್ರಶಸ್ತಿಗೆ ಲಲಿತಾ ಸಿದ್ಧಬಸವಯ್ಯ ಹಾಗೂ ಸೂ.ವೆಂ.ಆರಗ ವಿಮರ್ಶಾ ಪ್ರಶಸ್ತಿಗೆ ಸುರೇಶ ನಾಗಲಮಡಿಕೆ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಪ್ರತಿಷ್ಠಾನದ ಅಧ್ಯಕ್ಷ ಡಾ ಆರ್.ಲಕ್ಷ್ಮಿನಾರಾಯಾಣ ತಿಳಿಸಿದ್ದಾರೆ.

ಚಿಂತಾಮಣಿ ಕೊಡ್ಲೆಕೆರೆ ಹಾಗೂ ಡಾ.ಎಚ್.ಎಲ್.ಪುಷ್ಪಅವರಿದ್ದ ಆಯ್ಕೆ ಸಮಿತಿಯು ಲಲಿತಾ ಸಿದ್ಧಬಸವಯ್ಯನವರ ಸಾಹಿತ್ಯ ಸಾಧನೆಯನ್ನು ಗಣನೆಗೆ ತೆಗೆದುಕೊಂಡು ಪ್ರಶಸ್ತಿಗೆ ಆಯ್ಕೆ ಮಾಡಿತು. ಹಾಗೂ ಡಾ.ಎಚ್.ಎಸ್ ಮಾಧವರಾವ್ ಹಾಗೂ ಡಾ.ಕೆ.ಪಿ ಭಟ್ ಅವರಿದ್ದ ಆಯ್ಕೆ ಸಮಿತಿಯು ಸುರೇಶ ನಾಗಲಮಡಿಕೆ ಅವರ ‘ಹಲವು ಬಣ್ಣದ ಹಗ್ಗ' ವಿಮರ್ಶಾ ಕೃತಿಯನ್ನು ಪ್ರಶಸ್ತಿಗೆ ಆಯ್ಕೆ ಮಾಡಿತು ಎಂದು ಅವರು ಮಾಹಿತಿ ನೀಡಿದ್ದಾರೆ.

ನಗರದ ಎನ್.ಆರ್.ಕಾಲನಿಯ ಬಿಎಂಶ್ರೀ ಪ್ರತಿಷ್ಠಾನದಲ್ಲಿ ಎ.11ರಂದು ಸಂಜೆ 5.30ಕ್ಕೆ ನಡೆಯಲಿರುವ ಸಮಾರಂಭದಲ್ಲಿ ಡಾ.ಪಿ.ವಿ.ನಾರಾಯಣ ಪ್ರಶಸ್ತಿ ಪ್ರದಾನ ಮಾಡಲಿದ್ದು, ಪ್ರಶಸ್ತಿಯು 10ಸಾವಿರ ರೂ.ನಗದು, ಸ್ಮರಣಿಕೆಯನ್ನು ಒಳಗೊಂಡಿದೆ ಎಂದು ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News