ಸರಕಾರಿ ನೌಕರರಿಗೆ ತುಟ್ಟಿಭತ್ತೆ ಹೆಚ್ಚಳ
Update: 2019-03-28 21:15 IST
ಬೆಂಗಳೂರು, ಮಾ. 28: ರಾಜ್ಯ ಸರಕಾರಿ ನೌಕರರಿಗೆ ಜನವರಿ 1ರಿಂದ ಅನ್ವಯವಾಗುವಂತೆ ರಾಜ್ಯ ಸರಕಾರ ತುಟ್ಟಿಭತ್ತೆಯನ್ನು ಶೇ.3ರಷ್ಟು ಹೆಚ್ಚಳ ಮಾಡಿ ಗುರುವಾರ ಆದೇಶ ಹೊರಡಿಸಿದೆ.
ಚುನಾವಣಾ ಆಯೋಗದ ಅನುಮತಿ ಪಡೆದು ಶೇ.3.75ರಿಂದ ಶೇ.6.50ಕ್ಕೆ ತುಟ್ಟಿಭತ್ತೆಯನ್ನು ಹೆಚ್ಚಳ ಮಾಡಿದೆ. ಕಳೆದ ತಿಂಗಳು ಈ ಕುರಿತು ನಿರ್ಧಾರ ಕೈಗೊಂಡಿದ್ದ ರಾಜ್ಯ ಸರಕಾರ ಇದರಿಂದ ಆರ್ಥಿಕ ಹೊರೆಯನ್ನು ಪರಿಗಣಿಸಿ ಮಾಹಿತಿ ನೀಡುವಂತೆ ಪ್ರಧಾನ ಕಾರ್ಯದರ್ಶಿಗೆ ಸೂಚನೆ ನೀಡಿತ್ತು.
ಮೂಲ ವೇತನಕ್ಕೆ ಅನ್ವಯವಾಗುವಂತೆ 2019 ಜನವರಿ ಒಂದರಿಂದ ಈ ಹೊಸ ಆದೇಶ ಅನ್ವಯವಾಗಲಿದೆ. ರಾಜ್ಯ ಸರಕಾರಿ ನೌಕರರಿಗೆ 2018ರ ಪರಿಷ್ಕೃತ ವೇತನ ಶ್ರೇಣಿಗಳಲ್ಲಿ 2019ರ ಜನವರಿ 1ರಿಂದ ಜಾರಿಗೆ ಬರುವಂತೆ ತುಟ್ಟಿಭತ್ತೆ ಮೂಲ ವೇತನವನ್ನು ಹೆಚ್ಚಿಸಿ ಆದೇಶ ಹೊರಡಿಸಿದೆ.