ಗಾಂಧಿ ಪುತ್ರ ಹರಿಲಾಲ್ ಗಾಂಧಿ ಮತಾಂತರ ಪ್ರಸಂಗ

Update: 2019-03-30 13:07 GMT

78ವರ್ಷದ ಹಿಂದೆ ಈ ಘಟನೆ ನಡೆದಿತ್ತು. ಮಹಾತ್ಮಾ ಗಾಂಧೀಜಿಯವರ ಹಿರಿಯ ಪುತ್ರ ಹರಿಲಾಲ್ ಬಾಂಬೆಯ ಜುಮ್ಮಾ ಮಸೀದಿಯಲ್ಲಿ ಇಸ್ಲಾಂಗೆ ಮತಾಂತರಗೊಂಡಿದ್ದರು. ಮಹಾತ್ಮಾ ಗಾಂಧಿ ಅಥವಾ ಬಾಪು (ರಾಷ್ಟ್ರಪಿತ)ಗೆ ತಮ್ಮ ಮಗ ಇಸ್ಲಾಂಗೆ ಮತಾಂತರಗೊಳ್ಳುತ್ತಿರುವ ನೈಜ ಕಾರಣ ತಿಳಿದಿದ್ದರಿಂದ ಅವರು ತೀವ್ರ ಆತಂಕಿತರಾಗಿದ್ದರು.

ಹರಿಲಾಲ್ ಗಾಂಧಿ

ಸ್ವಹಿತಾಸಕ್ತಿಯ ಕಾರಣಕ್ಕಾಗಿಯೇ ಮತ್ತೊಂದು ಧರ್ಮವನ್ನು ಸ್ವೀಕರಿಸಬಾರದು ಎಂಬುದು ಗಾಂಧೀಜಿ ಭಾವನೆಯಾಗಿತ್ತು (ದಿ ಟೈಮ್ಸ್ ಆಫ್ ಇಂಡಿಯಾ ಡಾಟ್ ಕಾಮ್). ಇದರ ಮಾರನೇ ದಿನ, ಅಂದರೆ ಮೇ 30ರಂದು ಈ ಕುರಿತು ತಮ್ಮ ಮತ್ತೊಬ್ಬ ಪುತ್ರ ರಾಮದಾಸ ಗಾಂಧಿಗೆ ಅವರು ಹೀಗೆ ಬರೆದಿದ್ದರು ‘ಹರಿಲಾಲನ ಪರಾಕ್ರಮದ ಬಗ್ಗೆ ಈಗಷ್ಟೇ ಪತ್ರಿಕೆಗಳಲ್ಲಿ ಓದಿದೆ. ತಿಳುವಳಿಕೆ ಮತ್ತು ಸ್ವಾರ್ಥರಹಿತ ಉದ್ದೇಶದಿಂದ ಆತ ಇಸ್ಲಾಂಗೆ ಮತಾಂತರಗೊಳ್ಳುವುದಾದರೆ ಅದರಿಂದ ಏನೂ ಹಾನಿಯಿಲ್ಲ. ಆದರೆ ಆತ ಹಣದ ಆಸೆ ಹಾಗೂ ಭೋಗಾಸಕ್ತಿಯ ದುರಾಸೆಗೆ ಒಳಗಾಗಿದ್ದಾನೆ. ಹರಿಲಾಲನ ಮತಾಂತರ ಕುರಿತ ನನ್ನ ಭಾವನೆ ತಪ್ಪಾಗಿದ್ದರೆ ಆಗ ನನ್ನೆಲ್ಲಾ ಮಾನಸಿಕ ಆಘಾತದಿಂದ ಮುಕ್ತನಾಗಬಹುದಿತ್ತು. ಈ ಪತ್ರದ ಕೆಲವು ಅಂಶಗಳನ್ನು ಹರಿಲಾಲ್‌ಗೆ ಓದಿ ಹೇಳಬೇಕೆಂದು ಬಾಪು ಹೇಳಿದ್ದರು.

ಹರಿಲಾಲನು ಸತ್ಯ ಮತ್ತು ವಿಮೋಚನೆಯ ನೈಜ ಶೋಧಕ್ಕಾಗಿ ಇಸ್ಲಾಂಗೆ ಮತಾಂತರಗೊಂಡಿದ್ದರೆ ಆಗ ಗಾಂಧೀಜಿಯವರು ಯಾವುದೇ ಆಕ್ಷೇಪ ಸೂಚಿಸುತ್ತಿರಲಿಲ್ಲ ಎಂದು ಗುಜರಾತ್ ವಿದ್ಯಾಪೀಠದ ಉಪಕುಲಪತಿ ಸುದರ್ಶನ್ ಅಯ್ಯಂಗಾರ್ ಅಭಿಪ್ರಾಯ ಸೂಚಿಸಿದ್ದಾರೆ. ಎಲ್ಲಾ ಧರ್ಮಗಳೂ ವ್ಯಕ್ತಿಯೊಬ್ಬನನ್ನು ಸತ್ಯದ ದಾರಿಯಲ್ಲಿ ಮುಂದಕ್ಕೆ ಕರೆದೊಯ್ಯುವ ಸಮಾನ ಅಂತಸ್ಸತ್ವವನ್ನು ಹೊಂದಿವೆ. ಆದರೆ ಇದನ್ನು ವ್ಯಕ್ತಿ ಮೊದಲು ಅರಿತುಕೊಳ್ಳಬೇಕು ಎಂದು ಅಯ್ಯಂಗಾರ್ ಹೇಳುತ್ತಾರೆ. ಹರಿಲಾಲ್ ಮುಸ್ಲಿಮನಾದರೂ ಅದರಿಂದ ಆತ ಆ ಧರ್ಮದ ಅನುಯಾಯಿಯಾಗಲಾರ. ಇಸ್ಲಾಂ ಧರ್ಮದಲ್ಲಿ ಇರುವ ಉತ್ತಮ ಅಂಶಗಳನ್ನು ಆತ ನಿಜವಾಗಿಯೂ ಅನುಸರಿಸಿದರೆ ಆಗ ತೃಪ್ತಿಯಾಗುತ್ತದೆ. ಯಾವುದೇ ಧರ್ಮವನ್ನು ನಾವು ಅನುಸರಿಸಿದರೂ, ಆ ಧರ್ಮದ ಬಗ್ಗೆ ಅರಿತುಕೊಳ್ಳಬೇಕು ಮತ್ತು ಆ ಧರ್ಮಕ್ಕೆ ಶ್ರೇಯ ತರಬೇಕು ಎಂದು ಗಾಂಧೀಜಿ ಪತ್ರದಲ್ಲಿ ತಿಳಿಸಿದ್ದರು. ಆದರೆ ಬಾಪು ಊಹಿಸಿ ದಂತೆಯೇ ಆಯಿತು. ಅದೇ ವರ್ಷದ ನವೆಂಬರ್‌ನಲ್ಲಿ ಹರಿಲಾಲನು ಹಿಂದೂ ಧರ್ಮಕ್ಕೆ ಮರು ಮತಾಂತರಗೊಂಡಿದ್ದ. ಭಾರತದ ವಿಭಜನೆಯ ನಿಲುವಿನಿಂದ ಜಿನ್ನಾರನ್ನು ಹಿಂದೆ ಸರಿಯುವಂತೆ ಮಾಡುವಲ್ಲಿ ಅಸಮರ್ಥರಾದ ಜೊತೆಗೆ, ಹರಿಲಾಲನೊಡನೆ ಸೂಕ್ತವಾಗಿ ವ್ಯವಹರಿಸುವಲ್ಲಿಯೂ ಗಾಂಧೀಜಿಯ ಅಸಾಮರ್ಥ್ಯ ಮಹಾ ವಿಷಾದದ ವಿಷಯವಾಗಿತ್ತು.

ಗಾಂಧೀಜಿಯ ಕಠೋರ ನೈತಿಕತೆ, ಇಂದ್ರಿಯ ನಿಗ್ರಹ ಮತ್ತು ಬ್ರಿಟನ್ ವಿರುದ್ಧದ ಮೂಲಭೂತ ನಿಲುವು - ಇವು ಹರಿಲಾಲನಿಗೆ ಸವಾಲಿನ ವಿಷಯಗಳಾಗಿದ್ದವು. ಓರ್ವ ಮದ್ಯವ್ಯಸನಿಯಾಗಿದ್ದ ಹರಿಲಾಲ, ತಂದೆಯ ಆಶಯಕ್ಕೆ ವಿರುದ್ಧವಾಗಿ ಬ್ರಿಟನ್‌ನಿಂದ ಆಮದು ಮಾಡಲಾಗಿದ್ದ ಬಟ್ಟೆಗಳನ್ನೇ ಧರಿಸುತ್ತಿದ್ದ. 1948ರಲ್ಲಿ ಕೊನೆಯುಸಿರೆಳೆಯುವ ಕೆಲವೇ ಸಮಯದ ಮುನ್ನ (ಹಿಂದೂ ಭಯೋತ್ಪಾದಕರಿಂದ ಗಾಂಧೀಜಿ ಹತ್ಯೆಯಾದ ಕೆಲ ತಿಂಗಳ ಬಳಿಕ ) ಹರಿಲಾಲ ಇಸ್ಲಾಂಗೆ ಮತಾಂತರಗೊಂಡು ತನ್ನ ಹೆಸರನ್ನು ಅಬ್ದುಲ್ಲಾ ಎಂದು ಬದಲಾಯಿಸಿದ ಘಟನೆಯೂ ಶೋಚನೀಯವಾಗಿದೆ (ದಿ ಟೈಮ್ಸ್ ಆಫ್ ಇಂಡಿಯಾ ಡಾಟ್ ಕಾಮ್). ‘ಯಾವುದೇ ವ್ಯಕ್ತಿ ಹೊಂದಬಹುದಾದ ಮಹಾನ್ ತಂದೆ, ಆದರೆ ನನ್ನ ತಂದೆ ಹೀಗಿರಬಾರದೆಂದು ನಾನು ಬಯಸುವ ವ್ಯಕ್ತಿ’ ಎಂದು ಹರಿಲಾಲ್ ಗಾಂಧಿಜಿಯವರನ್ನು ಬಣ್ಣಿಸಿದ್ದ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News