×
Ad

ಹಳೇ ನೋಟು ಬದಲಾವಣೆ ದಂಧೆ: ನಾಲ್ವರ ಬಂಧನ

Update: 2019-03-30 22:32 IST

ಬೆಂಗಳೂರು, ಮಾ.30: ಗರಿಷ್ಠ ಮುಖಬೆಲೆಯ ಅಮಾನ್ಯೀಕರಣಗೊಂಡ ನೋಟುಗಳನ್ನು ಬದಲಾಯಿಸುವುದಾಗಿ ನಂಬಿಸಿ ವಂಚನೆ ಮಾಡಿದ ಆರೋಪದಡಿ ನಾಲ್ವರು ಆರೋಪಿಗಳನ್ನು ಇಲ್ಲಿನ ಸದಾಶಿವನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ.

ಆರೋಪಿಗಳು 1 ಕೋಟಿ ವೌಲ್ಯದ ಹಳೇ ನೋಟುಗಳನ್ನು ಪ್ರಸ್ತುತ ಚಲಾವಣೆಯಲ್ಲಿರುವ ನೋಟುಗಳಿಗೆ ನಗದು ಆಗಿ ಬದಲಾಯಿಸಲು ಯತ್ನಿಸಿ, ವಂಚನೆ ಮಾಡಿದ್ದರು. ಈ ಸಂಬಂಧ ಮಾಹಿತಿ ಸಂಗ್ರಹಿಸಿದ ಪೊಲೀಸರು ಕಾರ್ಯಾಚರಣೆ ನಡೆಸಿ ವಿನೋದ್ ಹಾಗೂ ಇತರೆ ಮೂವರನ್ನು ಬಂಧಿಸಿ, ತನಿಖೆ ಮುಂದುವರೆಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News