×
Ad

ಬೈಕ್‌ನಲ್ಲಿ ದಾಖಲೆ ಇಲ್ಲದೆ ಸಾಗಿಸುತ್ತಿದ್ದ 45 ಲಕ್ಷ ರೂ. ಜಪ್ತಿ

Update: 2019-04-02 19:27 IST
ಸಾಂದರ್ಭಿಕ ಚಿತ್ರ

ಬೆಂಗಳೂರು, ಎ.2: ಚುನಾವಣಾ ಅಕ್ರಮಗಳ ಮೇಲೆ ಹದ್ದಿನ ಕಣ್ಣಿಟ್ಟಿರುವ ಆಯೋಗದ ಅಧಿಕಾರಿಗಳು, ಬೈಕ್‌ನಲ್ಲಿ ದಾಖಲೆ ಇಲ್ಲದೆ ಸಾಗಿಸುತ್ತಿದ್ದ 45 ಲಕ್ಷ ರೂ.ಗಳನ್ನು ಜಪ್ತಿ ಮಾಡಿದ್ದಾರೆ.

ಜೆಸಿ ರಸ್ತೆ ವಿನೋಬಾನಗರದ ನಿವಾಸಿ ರಾಹುಲ್ ಎಂಬಾತ ಕಪ್ಪುಬ್ಯಾಗ್‌ನಲ್ಲಿಟ್ಟಿದ್ದ 45 ಲಕ್ಷ ರೂ.ನಗದನ್ನು ತನ್ನ ಬೈಕ್‌ನಲ್ಲಿ ಸಾಗಿಸುತ್ತಿದ್ದ ಎನ್ನಲಾಗಿದೆ. ಈ ಬಗ್ಗೆ ಬಂದ ಖಚಿತ ಮಾಹಿತಿ ಮೇರೆಗೆ ಮಹಾಲಕ್ಷ್ಮೀ ಬಡಾವಣೆ ಠಾಣೆ ಇನ್ಸ್‌ಪೆಕ್ಟರ್ ಪ್ರಶಾಂತ್ ಅವರು ತಮ್ಮ ಲೋಕಸಭಾ ವ್ಯಾಪ್ತಿಯ ಚುನಾವಣಾ ಫ್ಲೈಯಿಂಗ್ ಸ್ಕ್ವಾಡ್-4ನ್ನು ಬರಮಾಡಿಕೊಂಡಿದ್ದರು.

ಫ್ಲೈಯಿಂಗ್ ಸ್ಕ್ವಾಡ್ ಹನುಮಂತ ಬಗಲಿ ಹಾಗೂ ಇನ್ಸ್‌ಪೆಕ್ಟರ್ ಪ್ರಶಾಂತ್ ಅವರು ಜಿ.ಡಿ.ನಾಯ್ಡು ಹಾಲ್ ಬಳಿ ರಾಹುಲ್ ಸಂಚರಿಸುತ್ತಿದ್ದ ವಾಹನ ತಡೆದು ಪರಿಶೀಲಿಸಿದಾಗ ಕಪ್ಪುಬ್ಯಾಗ್‌ನಲ್ಲಿಟ್ಟಿದ್ದ 45 ಲಕ್ಷ ರೂ. ಪತ್ತೆಯಾಗಿದೆ.

ರಾಹುಲ್ ನನ್ನು ಠಾಣೆಗೆ ಕರೆತಂದು ವಿಚಾರಿಸಿದಾಗ ಆತ ತನ್ನ ಬಳಿ ಇರುವ ಹಣದ ಬಗ್ಗೆ ಸೂಕ್ತ ಮಾಹಿತಿ ಮತ್ತು ದಾಖಲೆ ನೀಡುವಲ್ಲಿ ವಿಫಲನಾದ ಹಿನ್ನೆಲೆಯಲ್ಲಿ ಆತನ ವಿರುದ್ಧ ಮಹಾಲಕ್ಷ್ಮೀ ಬಡಾವಣೆ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲು ಮಾಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News