ಬಿಜೆಪಿ ಅಭ್ಯರ್ಥಿ ಪಿ.ಸಿ.ಮೋಹನ್ ಜನರಿಂದ ದೂರ: ಪ್ರಕಾಶ್‌ ರಾಜ್

Update: 2019-04-02 15:53 GMT

ಬೆಂಗಳೂರು, ಎ.2: ಹಾಲಿ ಸಂಸದ ಪಿ.ಸಿ.ಮೋಹನ್ ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಜನರ ಹತ್ತಿರಕ್ಕೆ ಬಂದು ಸಮಸ್ಯೆಗಳು ಕೇಳಿರುವ ಒಂದು ಉದಾಹರಣೆ ಇಲ್ಲವೆಂದು ಪಕ್ಷೇತರ ಅಭ್ಯರ್ಥಿ ಪ್ರಕಾಶ್‌ ರಾಜ್ ಆರೋಪಿಸಿದರು.

ನಗರದ ಜೀವನ್‌ಭೀಮ್ ನಗರದಲ್ಲಿ ಚುನಾವಣಾ ಪ್ರಚಾರ ನಡೆಸಿದ ಅವರು, ಬಿಜೆಪಿ ಅಭ್ಯರ್ಥಿ ಪಿ.ಸಿ.ಮೋಹನ್ ಜನರ ಮತಗಳನ್ನು ಪಡೆದು ಸಂಸದರಾದರು. ಆದರೆ, ಮತದಾರರಿಗೆ ವಂಚನೆ ಮಾಡುವ ಮೂಲಕ ಜನವಿರೋಧಿಯಾಗಿದ್ದಾರೆ. ಇಂತವರನ್ನು ಮತ್ತೊಮ್ಮೆ ಯಾವ ಕಾರಣಕ್ಕೂ ಸಂಸದರನ್ನಾಗಿ ಆಯ್ಕೆ ಮಾಡಬೇಡಿ ಎಂದು ಮನವಿ ಮಾಡಿದರು.

ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರವು ಸಮಸ್ಯೆಗಳ ಆಗರವಾಗಿದೆ. ಕ್ಷೇತ್ರದಲ್ಲಿ ಕೊಳಗೇರಿಗಳು ಹೆಚ್ಚಾಗಿದ್ದು, ಇವುಗಳ ಅಭಿವೃದ್ಧಿ ಕನಿಷ್ಟ ಮಟ್ಟದ ಕೆಲಸವನ್ನು ಮಾಡಿಲ್ಲ. ಈಗಲೂ ಇಲ್ಲಿನ ಜನತೆ ಹಕ್ಕುಪತ್ರಕ್ಕಾಗಿ ಹಲವಾರು ವರ್ಷಗಳ ಕಾಲ ಸಂಸದ ಪಿ.ಸಿ.ಮೋಹನ್ ಮನೆ ಬಾಗಿಲಲ್ಲಿ ಕಾದಿದ್ದಾರೆ. ಆದರೆ, ಬಡವರವನ್ನು ಹತ್ತಿರಕ್ಕೆ ಕರೆದು ಮಾತನಾಡಿಸುವಂತಹ ಕನಿಷ್ಟ ಸೌಜನ್ಯವು ಬಿಜೆಪಿ ಅಭ್ಯರ್ಥಿಗೆ ಇಲ್ಲವಾಗಿದೆ ಎಂದು ಅವರು ವಾಗ್ದಾಳಿ ನಡೆಸಿದರು.

ಇಲ್ಲಿಯೆ ಹುಟ್ಟಿ ಬೆಳೆದಿರುವ ನಾನು ಕ್ಷೇತ್ರದ ಜನತೆಗಾಗಿ ಕೆಲಸ ಮಾಡಲು ಪಣತೊಟ್ಟು ಬಂದಿದ್ದೇನೆ. ತಮ್ಮ ಮುಂದಿನ ಜೀವನವನ್ನು ಈ ಕ್ಷೇತ್ರದ ಜನತೆಗಾಗಿ ಮೀಸಲಿಡಲು ಸಿದ್ಧನಿದ್ದೇನೆ. ಹೀಗಾಗಿ ಈ ಬಾರಿ ಚುನಾವಣೆಯಲ್ಲಿ ಒಂದು ಅವಕಾಶ ಮಾಡಿಕೊಡಬೇಕೆಂದು ಅವರು ಮತದಾರರಲ್ಲಿ ಮನವಿ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News