×
Ad

ಪ್ರತಿಷ್ಠಿತ ನಿತೇಶ್ ಎಸ್ಟೇಟ್ ಮೇಲೆ ಸಿಸಿಬಿ ದಾಳಿ

Update: 2019-04-02 21:32 IST

ಬೆಂಗಳೂರು, ಎ.2: ಪ್ರತಿಷ್ಠಿತ ನಿತೇಶ್ ಎಸ್ಟೇಟ್ ಕಂಪೆನಿ ಕಚೇರಿಗಳ ಮೇಲೆ ಸಿಸಿಬಿ ತನಿಖಾಧಿಕಾರಿಗಳು ದಾಳಿ ನಡೆಸಿದ್ದಾರೆ ಎಂದು ವರದಿಯಾಗಿದೆ.

ನಗರದ ಟ್ರಿನಿಟಿ ವೃತ್ತದ ಬಳಿಯಿರುವ ನಿತೇಶ್ ಎಸ್ಟೇಟ್ ಕಂಪೆನಿ ಮೇಲೆ ಸುಮಾರು 20ಕ್ಕೂ ಹೆಚ್ಚು ಸಿಸಿಬಿ ಅಧಿಕಾರಿಗಳು ದಾಳಿ ನಡೆಸಿ, ಪರಿಶೀಲನೆ ನಡೆಸಿದರು.

ಗ್ರಾಹಕರಿಗೆ ನಿವೇಶನ ಕೊಡಿಸುವ ನೆಪದಲ್ಲಿ ನೂರಾರು ಕೋಟಿ ವಂಚನೆ ಮಾಡಿರುವ ಆರೋಪ ನಿತೇಶ್ ಎಸ್ಟೇಟ್ ಕಂಪೆನಿ ಮೇಲೆ ಕೇಳಿಬಂದಿತ್ತು. ಈ ಸಂಬಂಧ ಹಲವು ಮಂದಿ ಸಿಸಿಬಿ ಪೊಲೀಸರಿಗೆ ದೂರು ನೀಡಿರುವ ಹಿನ್ನೆಲೆ, ಮಂಗಳವಾರ ಸಿಸಿಬಿ ಡಿಸಿಪಿ ಎಸ್.ಗಿರೀಶ್ ನೇತೃತ್ವದಲ್ಲಿ ದಾಳಿ ನಡೆಸಿ ಹಲವು ಮಹತ್ವದ ದಾಖಲೆಗಳನ್ನ ವಶಕ್ಕೆ ಪಡೆದುಕೊಂಡಿದ್ದಾರೆ ಎನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News