×
Ad

ಕಳ್ಳತನ ಪ್ರಕರಣಗಳನ್ನು ಬೇಧಿಸಿದ ಪೊಲೀಸರಿಗೆ ಬಹುಮಾನ

Update: 2019-04-02 21:33 IST

ಬೆಂಗಳೂರು,ಎ.2: ಪಶ್ಚಿಮ ವಿಭಾಗದ ಪೊಲೀಸರು 2 ಪ್ರತ್ಯೇಕ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಕಳ್ಳತನ ಪ್ರಕರಣಗಳನ್ನ ಬೇಧಿಸಿ ಮೂವರು ಆರೋಪಿಗಳನ್ನು ಬಂಧಿಸಿರುವುದಕ್ಕೆ ಪ್ರಶಂಸಿಸಿ ಪಶ್ಚಿಮ ವಿಭಾಗದ ಡಿಸಿಪಿ ರವಿ.ಡಿ.ಚನ್ನಣ್ಣವರ್ ನಗದು ಬಹುಮಾನ ಘೋಷಿಸಿದ್ದಾರೆ.

ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಚಿನ್ನಾಭರಣ ಕಳವು ಪ್ರಕರಣ ಸಂಬಂಧ ದೊಡ್ಡಬಿದರಕಲ್ಲು ನಿವಾಸಿ ಮಹೇಶ್ ಎಂಬಾತನನ್ನು ಬಂಧಿಸಿ 17 ಲಕ್ಷ ಬೆಲೆಯ ಚಿನ್ನಾಭರಣ ಜಪ್ತಿ ಮಾಡಿದ್ದರು.

ಮತ್ತೊಂದೆಡೆ ಜ್ಞಾನಭಾರತಿ ಪೊಲೀಸರು, ತಮ್ಮ ಠಾಣೆಯಲ್ಲಿ ದಾಖಲಾಗಿದ್ದ 9 ಕಳ್ಳತನ ಪ್ರಕರಣಗಳ ರೂವಾರಿಗಳಾದ ಟ್ಯಾನರಿ ರಸ್ತೆಯ ಅಮ್ಜದ್ ಮತ್ತು ಅಕ್ಮಲ್ ಬೇಗ್ ಎಂಬುವರನ್ನು ಬಂಧಿಸಿ 12 ಲಕ್ಷ ರೂ. ಮೌಲ್ಯದ 400ಗ್ರಾಂ ಚಿನ್ನಾಭರಣ ವಶಕ್ಕೆ ಪಡೆದಿದ್ದಾರೆ.

ಎರಡೂ ಠಾಣಾ ಪೋಲಿಸರ ಕಾರ್ಯಾಚರಣೆಗೆ ಪ್ರಶಂಸಿಸಿ ಪಶ್ಚಿಮ ವಿಭಾಗದ ಡಿಸಿಪಿ ರವಿ.ಡಿ.ಚನ್ನಣ್ಣವರ್ ನಗದು ಬಹುಮಾನ ಘೋಷಣೆ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News