100ನೇ ಬಾರಿ ಆರ್‌ಸಿಬಿಗೆ ವಿರಾಟ್ ಕೊಹ್ಲಿ ಸಾರಥ್ಯ

Update: 2019-04-03 03:30 GMT

ಬೆಂಗಳೂರು, ಎ.2: ರಾಜಸ್ಥಾನ ರಾಯಲ್ಸ್ ವಿರುದ್ಧ ಮಂಗಳವಾರ ನಡೆದ 12ನೇ ಆವೃತ್ತಿಯ ಐಪಿಎಲ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ನಾಯಕನಾಗಿ 100ನೇ ಬಾರಿ ಮುನ್ನಡೆಸಿದ್ದಾರೆ. ಕೊಹ್ಲಿ 2011ರಿಂದ ಆರ್‌ಸಿಬಿಯ ನಾಯಕನಾಗಿದ್ದು, ಇದೀಗ 100ನೇ ಪಂದ್ಯದಲ್ಲಿ ತಂಡವನ್ನು ಮುನ್ನಡೆಸುವುದರೊಂದಿಗೆ ಎಂ.ಎಸ್. ಧೋನಿ ಹಾಗೂ ಗೌತಮ್ ಗಂಭೀರ್ ಕ್ಲಬ್‌ಗೆ ಸೇರ್ಪಡೆಯಾದರು. ಈ ಇಬ್ಬರು ನಾಯಕರು ಐಪಿಎಲ್‌ನಲ್ಲಿ 100ಕ್ಕೂ ಅಧಿಕ ಪಂದ್ಯಗಳಲ್ಲಿ ನಾಯಕತ್ವವಹಿಸಿಕೊಂಡಿದ್ದಾರೆ.

 ಐಪಿಎಲ್‌ನಲ್ಲಿ ಎಲ್ಲ ತಂಡಗಳ ನಾಯಕರು ಕನಿಷ್ಠ 50 ಪಂದ್ಯಗಳಲ್ಲಿ ನಾಯಕತ್ವವಹಿಸಿಕೊಂಡಿದ್ದು, ಇವರ ಪೈಕಿ ಕೊಹ್ಲಿ ದಾಖಲೆ ಕಳಪೆಯಾಗಿದೆ. ಪ್ರಸ್ತುತ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕನಾಗಿರುವ ಧೋನಿ ಈ ಹಿಂದೆ ರೈಸಿಂಗ್ ಪುಣೆ ಸೂಪರ್ ಜೈಂಟ್ಸ್ ತಂಡದ ನಾಯಕನಾಗಿದ್ದರು. 162 ಐಪಿಎಲ್ ಪಂದ್ಯಗಳಲ್ಲಿ ನಾಯಕತ್ವವಹಿಸಿಕೊಂಡಿದ್ದ ಧೋನಿ ದಾಖಲೆ ಉತ್ತಮವಾಗಿದೆ.

ಇದೇ ವೇಳೆ, ಗಂಭೀರ್ ಕೋಲ್ಕತಾ ನೈಟ್ ರೈಡರ್ಸ್ ಹಾಗೂ ಡೆಲ್ಲಿ ಡೇರ್ ಡೆವಿಲ್ಸ್ ತಂಡವನ್ನು 129 ಪಂದ್ಯಗಳಲ್ಲಿ ನಾಯಕನಾಗಿ ಮುನ್ನಡೆಸಿದ್ದಾರೆ. ಧೋನಿಯ ನಾಯಕತ್ವದ ಗೆಲುವಿನ ಶೇಕಡಾಂಶ 60.24ರಷ್ಟಿದೆ. ಗಂಭೀರ್ 55.42 ಶೇ. ಹಾಗೂ ಕೊಹ್ಲಿ 46.87 ಶೇ.ವಿದೆ.

ನಾಯಕನಾಗಿ ಕೊಹ್ಲಿ ಸಮಗ್ರ ದಾಖಲೆ ಕಳಪೆಯಾಗಿದ್ದು ಇವರ ನೇತೃತ್ವದಲ್ಲಿ ಆರ್‌ಸಿಬಿ ಈ ತನಕ ಐಪಿಎಲ್ ಪ್ರಶಸ್ತಿ ಜಯಿಸಿಲ್ಲ. 44ರಲ್ಲಿ ಜಯ, 50ರಲ್ಲಿ ಸೋಲು, 2 ಪಂದ್ಯ ಟೈ ಹಾಗೂ ಮೂರು ಪಂದ್ಯಗಳಲ್ಲಿ ಫಲಿತಾಂಶ ಬಂದಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News