ಶೀಘ್ರ ಬ್ಯಾಡ್ಮಿಂಟನ್‌ಗೆ ಮರಳುವೆ: ಸಾತ್ವಿಕ್

Update: 2019-04-03 18:49 GMT

 ಹೊಸದಿಲ್ಲಿ, ಎ.3: ಕಳೆದ ವರ್ಷ ಭುಜನೋವಿಗೆ ಒಳಗಾಗಿರುವ ಭಾರತದ ಯುವ ಬ್ಯಾಡ್ಮಿಂಟನ್ ತಾರೆಗಳಲ್ಲೊಬ್ಬರಾದ ಸಾತ್ವಿಕ್ ಸಾಯಿರಾಜ್ ರಾಂಕಿ ರೆಡ್ಡಿ ಇನ್ನಷ್ಟೇ ಅಂಗಣಕ್ಕೆ ಮರಳಬೇಕಿದೆ.

 ಕಳೆದ ಡಿಸೆಂಬರ್‌ನಲ್ಲಿ ಗಾಯಕ್ಕೆ ಒಳಗಾಗಿ ಬಳಲುತ್ತಿರುವುದರಿಂದ 18 ವರ್ಷ ವಯಸ್ಸಿನ ಡಬಲ್ಸ್ ಆಟಗಾರ ಸ್ಪರ್ಧೆಯಿಂದ ಹೊರಗುಳಿದಿದ್ದಾರೆ. ಹೇರ್‌ಲೈನ್ ಫ್ರಾಕ್ಚರ್‌ನಿಂದ ಬಳಲುತ್ತಿರುವ ಅವರಿಗೆ ಚೇತರಿಸಿಕೊಳ್ಳಲು ಸಾಮಾನ್ಯಕ್ಕಿಂತ ಹೆಚ್ಚಿನ ಸಮಯ ತೆಗೆದುಕೊಳ್ಳಬೇಕಾಗಿದೆ.

 ‘‘ಹೌದು ಈ ನೋವು ಸ್ವಲ್ಪ ಗಂಭೀರವಾಗಿದೆ. ನಾನು ಇನ್ನೂ ಸಂಪೂರ್ಣವಾಗಿ ಫಿಟ್ ಆಗಿಲ್ಲ. ಆದರೆ ಈಗ ಅಭ್ಯಾಸ ಆರಂಭಿಸುತ್ತಿದ್ದೇನೆ. ಶೀಘ್ರದಲ್ಲಿ ಟೂರ್ನಿಗಳಿಗೆ ಪ್ರವೇಶ ಪಡೆಯುತ್ತೇನೆ’’ ಎಂದು ಸುದ್ದಿಸಂಸ್ಥೆಯೊಂದಕ್ಕೆ ಸಾತ್ವಿಕ್ ತಿಳಿಸಿದ್ದಾರೆ. ನವೆಂಬರ್‌ನಲ್ಲಿ ನಡೆದ ಸಯ್ಯದ್ ಮೋದಿ ಓಪನ್‌ನಲ್ಲಿ ಅವರು ಭುಜದ ನೋವಿಗೆ ಒಳಗಾಗಿದ್ದರು. ಆದಾಗ್ಯೂ ಪ್ರೀಮಿಯರ್ ಬ್ಯಾಡ್ಮಿಂಟನ್ ಲೀಗ್‌ನಲ್ಲಿ (ಪಿಬಿಎಲ್) ಭಾಗವಹಿಸಿದ್ದ ಅವರಿಗೆ ನೋವು ಉಲ್ಬಣಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News