ಒಂದು ವಾರದಲ್ಲಿ 10 ಲಕ್ಷ ಮತದಾರರ ಸೇರ್ಪಡೆ

Update: 2019-04-05 05:30 GMT

ಹೊಸದಿಲ್ಲಿ, ಎ.5: ದೇಶದಲ್ಲಿ ಒಂದು  ವಾರದೊಳಗೆ  10 ಲಕ್ಷ  ಮತದಾರರ ಸೇರ್ಪಡೆಯಾಗಿದೆ. ಈ ಪೈಕಿ 4 ಲಕ್ಷ   ಮಂದಿ ಇದೀಗ ಮತದಾನಕ್ಕೆ ಅರ್ಹತೆ ಪಡೆದಿರುವ 

18ರಿಂದ 19ರ ಹರೆಯದ ಯುವಕರು ಎನ್ನುವುದು ವಿಶೇಷ. ಚುನಾವಣಾ ಆಯೋಗ ಮತದಾನದ ಬಗ್ಗೆ ಜಾಗೃತಿ ಮೂಡಿಸಿದ ಪರಿಣಾಮವಾಗಿ ಭಾರೀ ಪ್ರಮಾಣದಲ್ಲಿ ಮತದಾರರ ಸೇರ್ಪಡೆಯಾಗಿದೆ.

ದೇಶದಲ್ಲಿ ಇದೀಗ ಮತದಾರರ ಸಂಖ್ಯೆ 90.84 ಕೋಟಿಗೆ ಮುಟ್ಟಿದೆ. ಈ ಪೈಕಿ 1.86 ಕೋಟಿ   18-19ರ ಹರೆಯದ ಹೊಸ ಮತದಾರರು ಸೇರಿದ್ದಾರೆ. ಕಳೆದ ವಾರ ಸೇವಾ ಮತದಾರರು 20 ,000 ಸೇರ್ಪಡೆಯಾಗಿದೆ. ಇದರಿಂದಾಗಿ ಇವರ ಸಂಖ್ಯೆ 17.7 ಕೋಟಿ ತಲುಪಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News