ಸೌದಿಯಲ್ಲಿ ಇಬ್ಬರು ಅಮೆರಿಕನ್ನರು ಸೇರಿ 7 ಜನರ ಬಂಧನ

Update: 2019-04-05 17:28 GMT

ದುಬೈ, ಎ. 5: ಸೌದಿ ಅರೇಬಿಯದಲ್ಲಿ ಹೊಸದಾಗಿ ಕನಿಷ್ಠ ಏಳು ಮಂದಿಯನ್ನು ಬಂಧಿಸಲಾಗಿದ್ದು, ಆ ಪೈಕಿ ಇಬ್ಬರು ಅಮೆರಿಕ ಪ್ರಜೆಗಳಾಗಿದ್ದಾರೆ ಎಂದು ಮಾನವಹಕ್ಕುಗಳ ಕಾರ್ಯಕರ್ತರು ಶುಕ್ರವಾರ ಹೇಳಿದ್ದಾರೆ.

ಬಂಧಿತ ಅಮೆರಿಕನ್ ಪ್ರಜೆಗಳನ್ನು ಲೇಖಕ ಹಾಗೂ ವೈದ್ಯ ಬದರ್ ಅಲ್-ಇಬ್ರಾಹೀಮ್ ಮತ್ತು ಸಲಾಹ್ ಅಲ್-ಹೈದರ್ ಎಂಬುದಾಗಿ ಗುರುತಿಸಲಾಗಿದೆ. ಸಲಾಹ್ ಅಲ್-ಹೈದರ್ ಖ್ಯಾತ ಸಾಮಾಜಿಕ ಹೋರಾಟಗಾರ್ತಿ ಅಝೀಝಾ ಅಲ್-ಯೂಸುಫ್‌ರ ಮಗನಾಗಿದ್ದಾರೆ.

ಮಹಿಳಾ ಹಕ್ಕುಗಳ ಕಾರ್ಯಕರ್ತೆಯಾಗಿರುವ ಅಝೀಝಾರನ್ನು ಕಳೆದ ವಾರ ತಾತ್ಕಾಲಿಕವಾಗಿ ಬಿಡುಗಡೆಮಾಡಲಾಗಿದೆಯಾದರೂ ಅವರ ವಿರುದ್ಧ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News