ಲೋಕಸಭಾ ಚುನಾವಣೆ: ಮತ ಚಲಾಯಿಸಿದ ಗ್ರಾಹಕರಿಗೆ ಉಚಿತ ಬಹುಮಾನ ಘೋಷಣೆ!

Update: 2019-04-07 18:05 GMT

ಬೆಂಗಳೂರು, ಎ.7: ನಗರದ ಅವೆನ್ಯೂ ರಸ್ತೆಯಲ್ಲಿರುವ ಕುಸುಮ್ ಜನರಲ್ ಸ್ಟೋರ್‌ನ ಮಾಲಕ ಕೃಷ್ಣಮೂರ್ತಿ ಮತದಾನದ ಜಾಗೃತಿ ಮೂಡಿಸುವ ಉದ್ದೇಶದಿಂದ ಮತ ಚಲಾಯಿಸಿ ನಂತರ ಶಾಹಿ ಬೆರಳು ತೋರಿಸುವ ಗ್ರಾಹಕರಿಗೆ ಉಚಿತವಾದ ಕೊಡುಗೆ ನೀಡುವುದಾಗಿ ಘೋಷಣೆ ಮಾಡಿದ್ದಾರೆ.

ನಗರದ ಅವೆನ್ಯೂ ರಸ್ತೆಯಲ್ಲಿ 1960ರಿಂದ ಜನರಲ್ ಸ್ಟೋರ್ ಹೊಂದಿದ್ದು, ಮತದಾನದ ಬಗ್ಗೆ ಜಾಗತಿ ಹಾಗೂ ಪ್ಲಾಸ್ಟಿಕ್ ನಿಷೇಧದ ಕುರಿತಂತೆ ಜಾಗತಿ ಮೂಡಿಸುವ ಕೆಲಸದಲ್ಲಿ ನಿರತರಾಗಿದ್ದಾರೆ. ಇದರೊಂದಿಗೆ ಕನ್ನಡದ ಬಗ್ಗೆ ವಿಶೇಷ ಪ್ರೀತಿ ಹೊಂದಿರುವ ಕೃಷ್ಣಮೂರ್ತಿ ದಯವಿಟ್ಟು ಕನ್ನಡ ಭಾಷೆಯಲ್ಲಿಯೇ ವ್ಯವಹರಿಸುವಂತೆ ಅಂಗಡಿ ಮುಂದೆ ಫಲಕಗಳನ್ನು ಹಾಕಿದ್ದಾರೆ.

ಮತದಾನ ಎಂಬುದು ಪ್ರಜಾಪ್ರಭುತ್ವದ ಹಬ್ಬವಾಗಿದೆ. ಹೀಗಾಗಿ ಪ್ರತಿಯೊಬ್ಬರೂ ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸುವ ಮೂಲಕ ತಮ್ಮ ಹಕ್ಕು ಚಲಾಯಿಸಬೇಕು. ಇತ್ತೀಚಿನ ದಿನಗಳಲ್ಲಿ ಜನರು ಮತದಾನದಲ್ಲಿ ಭಾಗಿಯಾಗಲು ಹೆಚ್ಚಿನ ಆಸಕ್ತಿ ತೋರುತ್ತಿಲ್ಲ. ಆ ಹಿನ್ನೆಲೆಯಲ್ಲಿ ಜಾಗತಿ ಮೂಡಿಸಲು ಮುಂದಾಗಿದ್ದು, ಎ.18ರಂದು ನಡೆಯುವ ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸಿ ಎ.19ರಂದು ಮಳಿಗೆಗೆ ಬರುವವರಿಗೆ ಉಡುಗೊರೆ ನೀಡಲಾಗುವುದು ಎಂದು ಎಂಬತ್ತರ ಹರೆಯದ ಕೃಷ್ಣಮೂರ್ತಿ ಅವರು ತಿಳಿಸಿದ್ದಾರೆ.

ತಮಗೆ ಪರಿಚಯವಿರುವ ಎಲ್ಲ ಅಂಗಡಳಿಗೆ ಮತದಾನ ಮಾಡಿದವರಿಗೆ ಉಡುಗೊರೆ ನೀಡುವ ಕರಪತ್ರಗಳನ್ನು ಹಂಚಲಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿಯೂ ಮಾಹಿತಿ ಹರಿಬಿಟ್ಟಿದ್ದು, ಕೃಷ್ಣಮೂರ್ತಿಯ ಅಭಿಯಾನಕ್ಕೆ ಕೈಜೋಡಿಸಿರುವ ಕೆಲ ಸಂಸ್ಥೆಗಳು ಉಡುಗೊರೆಯಾಗಿ ತಮ್ಮ ಉತ್ಪನ್ನಗಳನ್ನು ನೀಡಲು ಮುಂದಾಗಿವೆ. ಜತೆಗೆ ತಮ್ಮದೇ ಖರ್ಚಿನಲ್ಲೂ ಉಡುಗೊರೆ ನೀಡಲು ಕಷ್ಣಮೂರ್ತಿ ಮುಂದಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News