ಕಾಂಗ್ರೆಸ್ ಪಕ್ಷಕ್ಕೆ ಎಚ್.ಟಿ.ಸಾಂಗ್ಲಿಯಾನ ರಾಜೀನಾಮೆ
Update: 2019-04-08 19:45 IST
ಬೆಂಗಳೂರು, ಎ. 8: ಕ್ರೈಸ್ತ ಸಮುದಾಯದ ಕಡೆಗಣನೆಯನ್ನು ಖಂಡಿಸಿ ಕಾಂಗ್ರೆಸ್ ಉಪಾಧ್ಯಕ್ಷ ಹಾಗೂ ಪ್ರಾಥಮಿಕ ಸದಸ್ಯತ್ವಕ್ಕೆ ತಕ್ಷಣದಿಂದಲೇ ಜಾರಿಗೆ ಬರುವಂತೆ ಹಿರಿಯ ಮುಖಂಡ ಎಚ್.ಟಿ.ಸಾಂಗ್ಲಿಯಾನ ಸೋಮವಾರ ರಾಜೀನಾಮೆ ಸಲ್ಲಿಸಿದ್ದಾರೆ.
ರಾಜ್ಯದ 28 ಲೋಕಸಭಾ ಕ್ಷೇತ್ರಗಳ ಪೈಕಿ ಕ್ರೈಸ್ತ ಸಮುದಾಯಕ್ಕೆ ಟಿಕೆಟ್ ನೀಡಿಲ್ಲ. ಆ ಮೂಲಕ ರಾಜ್ಯ ಹಾಗೂ ಕಾಂಗ್ರೆಸ್ ಹೈಕಮಾಂಡ್ ಕ್ರೈಸ್ತ ಸಮುದಾಯವನ್ನು ಸಂಪೂರ್ಣ ಕಡೆಣಿಸಲಾಗಿದೆ. ಕ್ರೈಸ್ತ ಸಮುದಾಯದ ಕಡೆಗಣನೆ ಬಗ್ಗೆ ಎಐಸಿಸಿ ಪ್ರಧಾನ ಕಾರ್ಯದರ್ಶಿಯೂ ಆಗಿರುವ ಪ್ರಿಯಾಂಕಾ ಗಾಂಧಿಯವರ ಗಮನಕ್ಕೆ ತಂದರೂ ಯಾವುದೆ ಪ್ರಯೋಜನ ಆಗಿಲ್ಲ.
ಹೀಗಾಗಿ ಸಮುದಾಯದ ಭಾವನೆಯನ್ನು ಅರಿತು ನಾನು ಪಕ್ಷಕ್ಕೆ ರಾಜೀನಾಮೆ ಸಲ್ಲಿಸುತ್ತಿದ್ದೇನೆ ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಯವರಿಗೆ ರಾಜೀನಾಮೆ ಪತ್ರವನ್ನು ಹಿರಿಯ ಮುಖಂಡ ಎಚ್.ಟಿ.ಸಾಂಗ್ಲಿಯಾನ ಸೋಮವಾರ ರವಾನೆ ಮಾಡಿದ್ದಾರೆ.