ಅಗ್ರಸ್ಥಾನದಲ್ಲಿ ಮುಂದುವರಿದ ಜಪಾನ್ ನ ನವೊಮಿ ಒಸಾಕಾ

Update: 2019-04-09 02:11 GMT

ಡಬ್ಲ್ಯುಟಿಎ ರ‍್ಯಾಂಕಿಂಗ್

ಪ್ಯಾರಿಸ್, ಎ.8: ಸೋಮವಾರ ಪ್ರಕಟವಾದ ನೂತನ ಡಬ್ಲುಟಿಎ ರ್ಯಾಂಕಿಂಗ್‌ನಲ್ಲಿ ರೋಮಾನಿಯದ ಸಿಮೊನಾ ಹಾಲೆಪ್‌ಗಿಂತ ಸ್ವಲ್ಪ ಮುನ್ನಡೆ ಯಲ್ಲಿರುವ ಜಪಾನ್‌ನ ನವೊಮಿ ಒಸಾಕಾ ಅಗ್ರಸ್ಥಾನದಲ್ಲಿ ಮುಂದುವರಿ ದಿದ್ದಾರೆ.

ಹಾಲೆಪ್‌ಗಿಂತ ಒಸಾಕಾ 185 ಅಂಕಗಳಿಂದ ಮುನ್ನಡೆ ಯಲ್ಲಿದ್ದಾರೆ. ಝೆಕ್ ಗಣರಾಜ್ಯದ ಜೋಡಿಯಾದ ಪೆಟ್ರಾ ಕ್ವಿಟೋವಾ ಹಾಗೂ ಕರೊಲಿನಾ ಪ್ಲ್ಲಿಸ್ಕೋವಾ ಕ್ರಮವಾಗಿ ಮೂರು ಹಾಗೂ ನಾಲ್ಕನೇ ಸ್ಥಾನದಲ್ಲಿದ್ದಾರೆ.

ರವಿವಾರ ಚಾರ್ಲ್ಸ್‌ಟನ್ ಓಪನ್ ಪ್ರಶಸ್ತಿ ಜಯಿಸಿದ ಅಮೆರಿಕದ ಮ್ಯಾಡಿಸನ್ ಕೀ ನಾಲ್ಕು ಸ್ಥಾನ ಏರಿಕೆ ಕಂಡು 14ನೇ ಸ್ಥಾನ ತಲುಪಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News