ಏಳನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್ ಜು.19ಕ್ಕೆ ಆರಂಭ

Update: 2019-04-09 02:19 GMT

ಹೊಸದಿಲ್ಲಿ, ಎ.8: ಏಳನೇ ಆವೃತ್ತಿಯ ಪ್ರೊ ಕಬಡ್ಡ್ಡಿ ಲೀಗ್(ಪಿಕೆಎಲ್)ಜು.19 ರಿಂದ ಅಕ್ಟೋಬರ್ 9ರ ತನಕ ನಡೆಯಲಿದೆ ಎಂದು ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.

 ‘‘ಆರನೇ ಆವೃತ್ತಿಯ ಕಬಡ್ಡಿ ಲೀಗ್‌ನಲ್ಲಿ ವೀಕ್ಷಕರ ಸಂಖ್ಯೆಯಲ್ಲಿ ಸ್ವಲ್ಪ ಇಳಿಮುಖವಾಗಿತ್ತು. ಹಬ್ಬಗಳ ಋತುವಿನಲ್ಲೇ ಕಬಡ್ಡಿ ಲೀಗ್ ಆಯೋಜಿಸಿರುವುದು ಇದಕ್ಕೆ ಮುಖ್ಯ ಕಾರಣವಾಗಿತ್ತು. ಏಳನೇ ಆವೃತ್ತಿಯ ಲೀಗ್ ಈ ಹಿಂದಿನಂತೆ ಜುಲೈನಲ್ಲಿ ಆರಂಭವಾಗಲಿದೆ. ಆರನೇ ಆವೃತ್ತಿಯ ಲೀಗ್ 2018ರ ಅಕ್ಟೋಬರ್‌ನಲ್ಲಿ ಆರಂಭವಾಗಿತ್ತು. 2020ರ ಆವೃತ್ತಿಯ ಲೀಗ್ ಕೂಡ ಜುಲೈನಲ್ಲಿ ಆರಂಭವಾಗಲಿದೆ’’ಎಂದು ಪಿಕೆಎಲ್ ಆಯುಕ್ತ ಅನುಪಮ್ ಗೋಸ್ವಾಮಿ ಹೇಳಿದ್ದಾರೆ.

13 ದೇಶಗಳ 441 ಆಟಗಾರರು ಭಾಗವಹಿಸಲಿರುವ ಕಬಡ್ಡಿ ಆಟಗಾರರ ಹರಾಜು ಪ್ರಕ್ರಿಯೆಗಿಂತ ಮೊದಲು ಗೋಸ್ವಾಮಿ ಈ ವಿಚಾರ ಬಹಿರಂಗಪಡಿಸಿದರು. ಹರಾಜಿನಲ್ಲಿ ಭಾರತದ 388 ಹಾಗೂ ವಿದೇಶದ 53 ಆಟಗಾರರು ಇದ್ದಾರೆ. ಹರಾಜಿನಲ್ಲಿ 12 ಫ್ರಾಂಚೈಸಿ ತಂಡಗಳು ತಲಾ 4.4 ಕೋ.ರೂ. ವ್ಯಯಿಸಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News