×
Ad

ಲಂಚಕ್ಕೆ ಬೇಡಿಕೆ: ಎಸಿಬಿ ಬಲೆಗೆ ಬಿದ್ದ ಇನ್ಸ್‌ಪೆಕ್ಟರ್

Update: 2019-04-09 22:33 IST

ಬೆಂಗಳೂರು, ಎ.9: ನಿವೇಶನ ತಕರಾರು ಬಗೆಹರಿಸಲು ಲಕ್ಷಾಂತರ ರೂಪಾಯಿಗಳಿಗೆ ಬೇಡಿಕೆಯಿಟ್ಟಿದ್ದ ಆರೋಪದ ಮೇಲೆ ಕೆಂಗೇರಿ ಸಂಚಾರ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ವಿ.ಎಸ್.ಶಬರೀಶ್ ಎಸಿಬಿ ಬಲೆಗೆ ಬಿದ್ದಿದ್ದಾರೆ. 

ನಗರದ ರಿಯಲ್ ಎಸ್ಟೇಟ್ ಏಜೆಂಟ್‌ರೊಬ್ಬರು 2013ನಲ್ಲಿ ಮಾಗಡಿ ವ್ಯಾಪ್ತಿ ಕೆಲವರಿಗೆ ನಿವೇಶನಗಳನ್ನು ಮಾರಾಟ ಮಾಡಿದ್ದರು. ಆದರೆ, ನಿವೇಶನಗಳ ವಿಚಾರದಲ್ಲಿ ತಕರಾರುಗಳಿದ್ದ ಕಾರಣ ಖರೀದಿಸಿದ್ದ ನಿವೇಶನದಾರರು ತಮ್ಮ ನಿವೇಶನವನ್ನು ಮರು ಮಾರಾಟ ಮಾಡಿಕೊಡುವಂತೆ ಹೇಳಿದ್ದರು. ಈ ಹಿಂದೆ ಮಾಗಡಿ ಪೊಲೀಸ್ ಠಾಣೆಯಲ್ಲಿ ಇನ್ಸ್‌ಪೆಕ್ಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ವಿ.ಎಸ್.ಶಬರೀಶ್ ಅವರನ್ನು ನಿವೇಶನದಾರರು ಸಂಪರ್ಕಿಸಿದ್ದರು. ವಿಚಾರಣೆ ನಡೆಸಿದ ಶಬರೀಶ್, ಕೆಲ ದಿನಗಳ ಹಿಂದೆ ಕೆಂಗೇರಿ ಸಂಚಾರ ಪೊಲೀಸ್ ಠಾಣೆಗೆ ವರ್ಗಾವಣೆ ಆಗಿದ್ದ. ಆದರೂ, ಶಬರೀಶ್, ಹುಲ್ಲೂರಯ್ಯ ಎಂಬುವರು ಸೇರಿಕೊಂಡು ಮರುನೋಂದಣಿ ಮಾಡಿ ನಿವೇಶನದಾರರಿಗೆ ಹಣವನ್ನು ಹಿಂದಿರುಗಿಸುವಂತೆ ಮತ್ತು ತಮಗೆ 15 ಲಕ್ಷ ಲಂಚ ನೀಡುವಂತೆ ಬೇಡಿಕೆ ಇಟ್ಟಿದ್ದರು ಎಂದು ಎಸಿಬಿ ತಿಳಿಸಿದೆ.

ಈ ಸಂಬಂಧ ಕಾರ್ಯಾಚರಣೆ ನಡೆಸಿದ ಎಸಿಬಿ ತನಿಖಾಧಿಕಾರಿಗಳು ಆರೋಪಿಗಳಾದ ಶಬರೀಶ್, ಹುಲ್ಲೂರಯ್ಯ ಲಂಚ ಸ್ವೀಕರಿಸುವಾಗ ಸೆರೆ ಹಿಡಿದಿದ್ದು, ತನಿಖೆ ಮುಂದುವರೆಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News