ನೀತಿ ಸಂಹಿತೆ ಉಲ್ಲಂಘನೆ : 64.46ಕೋಟಿ ರೂ.ನಗದು, ಮದ್ಯ ವಶ

Update: 2019-04-10 14:27 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಎ.10: ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿದ ಆರೋಪದಡಿ ಫ್ಲೈಯಿಂಗ್ ಸ್ಕ್ವಾಡ್ಸ್, ಸ್ಟಾಟಿಕ್ ಸರ್ವೆಲೆನ್ಸ್ ಸ್ಕ್ವಾಡ್‌ಗಳು ಹಾಗೂ ಅಬಕಾರಿ ತಂಡಗಳು ಕಾರ್ಯಾಚರಣೆ ನಡೆಸಿ ಒಟ್ಟು 64.46ಕೋಟಿ ರೂ.ಮೌಲ್ಯದ ನಗದು, ಮದ್ಯ ವ್ತಗಳನ್ನು ವಶಪಡಿಸಿಕೊಳ್ಳಲಾಗಿದೆ.

ಫ್ಲೈಯಿಂಗ್ ಸ್ಕ್ವಾಡ್‌ಗಳು, ಸ್ಟಾಟಿಕ್ ಸರ್ವೆಲೆನ್ಸ್ ಸ್ಕ್ವಾಡ್‌ಗಳು ಹಾಗೂ ಪೊಲೀಸ್ ಪ್ರಾಧಿಕಾರಿಗಳು 14.33ಕೋಟಿ ರೂ.ನಗದು, 60ಲಕ್ಷ ರೂ.ಮೌಲ್ಯದ ಮದ್ಯ ಹಾಗೂ 135.5ಕೆಜಿ ಮಾದಕ ದ್ರವ್ಯಗಳನ್ನು ಮತ್ತು 2.13ಕೋಟಿ ರೂ.ಪ್ರಥಮ ಮಾಹಿತಿ ವರದಿ ದಾಖಲಿಸಲಾಗಿದೆ. ಹಾಗೂ ಆದಾಯ ತೆರಿಗೆ ಇಲಾಖೆಯು 12ಕೋಟಿ ರೂ.ನಗದು, 1.24ಕೋಟಿ ರೂ.ಮೌಲ್ಯದ ಇತರೆ ವಸ್ತುಗಳನ್ನು ಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.

ಅಬಕಾರಿ ಇಲಾಖೆ 33.82ಕೋಟಿ ರೂ.ವೌಲ್ಯದ ಮದ್ಯ, 4.40ಲಕ್ಷ ರೂ.14.077ಕೆಜಿ ಮಾದಕ ದ್ರವ್ಯ, ವಶಪಡಿಸಿಕೊಂಡು 2171ಪ್ರಕರಣಗಳು, 7ಎಸ್‌ಡಿಪಿಎಸ್ ಮತ್ತು ಕರ್ನಾಟಕ ಅಬಕಾರಿ ಕಾಯ್ದೆ 1965ರ ಪರಿಚ್ಚೇದ 15(ಎ) ಅನ್ವಯ 9180ಪ್ರಕರಣಗಳನ್ನು ದಾಖಲಿಸಿವೆ ಮತ್ತು 1141ವಿವಿಧ ಮಾದರಿಯ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ.

ಒಟ್ಟಾರೆ 95418 ಶಸ್ತ್ರಾಸ್ತ್ರಗಳನ್ನು ಜಮೆ ಮಾಡಿಕೊಳ್ಳಲಾಗಿದೆ. 8ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ. 8ಶಸ್ತ್ರಾಸ್ತ್ರ ಪರವಾನಿಗೆಯನ್ನು ರದ್ದು ಪಡಿಸಲಾಗಿದೆ. ಸಿಆರ್‌ಪಿಸಿ ಕಾಯ್ದೆಯಡಿ 43987 ಪ್ರಕರಣಗಳನ್ನು ದಾಖಲಿಸಲಾಗಿದೆ. ಈ ಪ್ರಕರಣಗಳಡಿ 45461 ವ್ಯಕ್ತಿಗಳಿಂದ ಮುಚ್ಚಳಿಕೆಯನ್ನು ಪಡೆಯಲಾಗಿದೆ. 37658ಜಾಮೀನು ರಹಿತ ವಾರೆಂಟ್‌ಗಳನ್ನು ಚುನಾವಣೆ ಘೋಷಣೆಯಾದ ದಿನಾಂಕದಿಂದ ಈವರೆಗೆ ಜಾರಿಗೊಳಿಸಲಾಗಿದೆ.

ಸಿ ವಿಜಿಲ್ ಅಪ್ಲಿಕೇಶನ್ ಮೂಲಕ 1946 ದೂರುಗಳನ್ನು ಸ್ವೀಕರಿಸಲಾಗಿದೆ. ಇದರಲ್ಲಿ ಅನುಮತಿ ಇಲ್ಲದೆ ಪೋಸ್ಟರ್, ಬ್ಯಾನರ್, ಹಣ ಹಂಚಿಕೆ, ಅನುಮತಿರಹಿತ ವಾಹನ ಅಥವಾ ಬೆಂಗಾವಲು ವಾಹನಗಳು. ಮದ್ಯ ಹಂಚಿಕೆ, ಉಡುಗೊರೆ, ಕೂಪನ್ ಹಂಚಿಕೆ, ಕಾಸಿಗಾಗಿ ಸುದ್ದಿ, ಸಾರ್ವಜನಿಕ ಸ್ವತ್ತುಗಳ ಅಂದಗೆಡಿಸುವಿಕೆ ಇವು ಪ್ರಮುಖ ದೂರುಗಳಾಗಿವೆ. ಇವುಗಳಲ್ಲಿ 632 ದೂರುಗಳು ನಿಜವೆಂದು ಬಂದಿದ್ದು, ಸೂಕ್ತ ಕ್ರಮ ಕೈಗೊಳ್ಳಲಾಗಿದೆ ಎಂದು ಪ್ರಕಟನೆಯಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News