ಎ.13ಕ್ಕೆ ಶ್ರೀರಾಮನವಮಿ: ಬೆಂಗಳೂರು ನಗರದಲ್ಲಿ ಮಾಂಸ ಮಾರಾಟ ನಿಷೇಧ
Update: 2019-04-10 23:44 IST
ಬೆಂಗಳೂರು, ಎ. 10: ಶ್ರೀರಾಮನವಮಿ ಹಾಗೂ ಮಹಾವೀರ ಜಯಂತಿ ಪ್ರಯುಕ್ತ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ) ವ್ಯಾಪ್ತಿಯಲ್ಲಿ ಎ.13 ಮತ್ತು ಎ.17ರಂದು ಪ್ರಾಣಿಗಳ ವಧೆ ಮತ್ತು ಮಾಂಸ ಮಾರಾಟವನ್ನು ನಿಷೇಧ ಮಾಡಲಾಗಿದೆ.
ಎ.13ರ ಶನಿವಾರದಂದು ಶ್ರೀರಾಮನಮ ಹಬ್ಬದ ಪ್ರಯುಕ್ತ ಮತ್ತು ಎ.17ರ ಬುಧವಾರದಂದು ಮಹಾವೀರ ಜಯಂತಿ ಹಬ್ಬದ ಪ್ರಯುಕ್ತ ಎರಡೂ ದಿನ ಬಿಬಿಎಂಪಿ ಪ್ರಾಣಿಗಳ ವಧೆ ಮತ್ತು ಮಾಂಸ ಮಾರಾಟ ಸಂಪೂರ್ಣ ನಿಷೇಧಿಸಿ ಆದೇಶ ಹೊರಡಿಸಲಾಗಿದೆ.