ಪುರುಷರ ಸಿಂಗಲ್ಸ್ ನಲ್ಲಿ ಸಮೀರ್, ಪ್ರಣಯ್ ಮಿಂಚು

Update: 2019-04-11 04:11 GMT

ಸಿಂಗಾಪುರ ಓಪನ್‌ನ ಪುರುಷರ ಸಿಂಗಲ್ಸ್‌ನ ಪ್ರಥಮ ಸುತ್ತಿನ ಪಂದ್ಯಗಳಲ್ಲಿ ಜಯ ಸಾಧಿಸಿದ ಭಾರತದ ಸಮೀರ್ ವರ್ಮಾ ಹಾಗೂ ಎಚ್.ಎಸ್.ಪ್ರಣಯ್ ದ್ವಿತೀಯ ಸುತ್ತಿಗೆ ಪ್ರವೇಶ ಪಡೆದಿದ್ದಾರೆ. ಪ್ರಣಯ್ ಅವರು ಫ್ರಾನ್ಸ್‌ನ ಬ್ರೈಸ್ ಲೆವೆರ್ಡೆಝ್ ವಿರುದ್ಧ 11-21, 21-16, 21-18 ಗೇಮ್‌ಗಳ ಪೈಪೋಟಿಯುತ ಪಂದ್ಯದಲ್ಲಿ ಗೆಲುವಿನ ತೋರಣ ಕಟ್ಟಿದರು.

ಪ್ರಣಯ್ ತಮ್ಮ ಮುಂದಿನ ಪಂದ್ಯದಲ್ಲಿ ವಿಶ್ವ ನಂ.1 ಜಪಾನ್‌ನ ಕೆಂಟೊ ಮೊಮೊಟಾ ಅಥವಾ ಭಾರತದ ಸಾಯಿ ಪ್ರಣೀತ್ ಅವರನ್ನು ಎದುರಿಸಲಿದ್ದಾರೆ.

ಮತ್ತೊಂದು ಪಂದ್ಯದಲ್ಲಿ ಸಂಪೂರ್ಣ ಪ್ರಾಬಲ್ಯ ಮೆರೆದ ಸಮೀರ್ ವರ್ಮಾ, ಥಾಯ್ಲೆಂಡ್‌ನ ಸುಪ್ಪಾನ್ಯು ಅವಿಹಿಂಗ್‌ಸಾನ್ ಎದುರು 21-14, 21-16ರಿಂದ ಜಯದ ನಗೆ ಬೀರಿದರು. ಸಮೀರ್ ತಮ್ಮ ಮುಂದಿನ ಪಂದ್ಯದಲ್ಲಿ ಚೀನಾದ ಲೂ ಗ್ವಾಂಗ್‌ಝು ಅವರ ಸವಾಲಿಗೆ ಸಜ್ಜಾಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News