‘ಸಿಇಟಿ-2019’ ಪ್ರವೇಶ ಪತ್ರ ಡೌನ್‌ಲೋಡ್

Update: 2019-04-11 18:22 GMT

ಬೆಂಗಳೂರು, ಎ.11: ರಾಜ್ಯ ಪರೀಕ್ಷಾ ಪ್ರಾಧಿಕಾರವು ಸರಕಾರದ ನಿರ್ದೇಶನದಂತೆ 2019-20ನೇ ಸಾಲಿನ ವೃತ್ತಿಪರ ಕೋರ್ಸುಗಳ ಪ್ರವೇಶಕ್ಕಾಗಿ ಸಾಮಾನ್ಯ ಪ್ರವೇಶ ಪರೀಕ್ಷೆ-2019 ಅನ್ನು ಎ.29 ಮತ್ತು 30ರಂದು ನಡೆಸಲಿದೆ.

ಅಭ್ಯರ್ಥಿಗಳು ಪ್ರಾಧಿಕಾರದ ವೆಬ್‌ಸೈಟ್ http://kea.kar.nic.in  ಗೆ ಭೇಟಿ ನೀಡಿ ನಿಗದಿತ ಲಿಂಕ್ ಅನ್ನು ಆಯ್ಕೆ ಮಾಡಿ ಪ್ರವೇಶ ಪತ್ರವನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ.

ಸಿಇಟಿ-2019ಕ್ಕೆ ಅಭ್ಯರ್ಥಿಗಳಿಗೆ ನೀಡಲಾಗಿರುವ ಸೂಚನೆಗಳನ್ನು ಪ್ರಾಧಿಕಾರದ ವೆಬ್‌ಸೈಟಿನಿಂದ ಡೌನ್‌ಲೋಡ್ ಮಾಡಿಕೊಂಡು ಮಾರ್ಗದರ್ಶನಗಳನ್ನು, ಕಾರ್ಯ ವಿಧಾನಗಳನ್ನು ತಪ್ಪದೇ ಅನುಸರಿಸಲು ಸೂಚಿಸಿದೆ.

ಪಿಜಿ-ದಂತವೈದ್ಯಕೀಯ: ಹೊಸದಿಲ್ಲಿಯ NBE  ಅವರು ಎ.4ರ ನೋಟಿಸ್‌ನಲ್ಲಿ NEET  MDS 2019 ಕನಿಷ್ಠ ಅರ್ಹತೆಯ ಅಂಕಗಳನ್ನು ಪರಿಷ್ಕರಿಸಿರುತ್ತಾರೆ. ಕನಿಷ್ಟ ಅರ್ಹತೆಯ ಅಂಕಗಳನ್ನು ಪರಿಷ್ಕರಿಸಿದ ಹಿನ್ನೆಲೆಯಲ್ಲಿ ಅರ್ಹಗೊಳ್ಳುವ ಸದರಿ ಅಭ್ಯರ್ಥಿಗಳು ಮಾತ್ರ ಎ.12 ರಿಂದ 14ರವರೆಗೆ ಆನ್‌ಲೈನ್ ನೋಂದಣಿ ಮಾಡಿ ಎ.16ರಂದು ದಾಖಲಾತಿ ಪರಿಶೀಲನೆಗೆ ಎಲ್ಲ ಮೂಲ ದಾಖಲಾತಿಗಳೊಂದಿಗೆ ಹಾಜರಾಗಬಹುದಾಗಿದೆ ಎಂದು ರಾಜ್ಯ ಪರೀಕ್ಷಾ ಪ್ರಾಧಿಕಾರದ ಆಡಳಿತಾಧಿಕಾರಿಯ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News