ಸರ್ಬಿಯ ಟೆನಿಸ್ ಒಕ್ಕೂಟದೊಂದಿಗೆ ಭಾರತ ಒಪ್ಪಂದ

Update: 2019-04-12 03:07 GMT

ಹೊಸದಿಲ್ಲಿ, ಎ.11: ವಿಶ್ವ ಪ್ರಸಿದ್ಧ ಸರ್ಬಿಯ ಟೆನಿಸ್ ಕೋಚ್‌ಗಳಿಂದ ಭಾರತದ ಕಿರಿಯ ಆಟಗಾರರಿಗೆ ತರಬೇತಿ ಕೊಡಿಸುವ ಉದ್ದೇಶದಿಂದ ಅಖಿಲ ಭಾರತ ಟೆನಿಸ್ ಒಕ್ಕೂಟವು (ಎಐಟಿಎ) ಸರ್ಬಿಯ ಟೆನಿಸ್ ಒಕ್ಕೂಟದೊಡನೆ (ಎಸ್‌ಟಿಎಫ್) ತಿಳುವಳಿಕಾ ಪತ್ರಕ್ಕೆ (ಎಮ್‌ಒಯು) ಸಹಿ ಹಾಕಿದೆ. ತರಬೇತಿಯು ಇಲ್ಲಿಯ ಆರ್.ಕೆ. ಖನ್ನಾ ಕ್ರೀಡಾಂಗಣದಲ್ಲಿ ನಡೆಯಲಿದೆ.

ಈ ಕುರಿತು ಸ್ಪಷ್ಟಪಡಿಸಿರುವ ಎಐಟಿಎ ಪ್ರಧಾನ ಕಾರ್ಯದರ್ಶಿ ಹಿರೊನ್ಮಯ್ ಚಟರ್ಜಿ ಹಾಗೂ ಎಸ್‌ಟಿಎಫ್ ಸಿಇಒ ಡುಸಾನ್ ಒರ್ಲಾಂಡಿಕ್ ‘‘ಬುಧವಾರ ತಿಳುವಳಿಕಾ ಪತ್ರಕ್ಕೆ ಸಹಿ ಹಾಕಲಾಗಿದೆ’’ ಎಂದು ತಿಳಿಸಿದ್ದಾರೆ.

  ‘‘ಆದೇಶಗಳು ಹಾಗೂ ಕ್ಷಮತೆಯ ವ್ಯಾಪ್ತಿಯಲ್ಲಿ ಸಹಕಾರದ ಉದ್ದೇಶದೊಂದಿಗೆ ಉಭಯ ಒಕ್ಕೂಟಗಳು ಭಾರತದಲ್ಲಿನ ಕಿರಿಯ ಆಟಗಾರರ ಬೆಳವಣಿಗೆಗೆ ಶ್ರಮಿಸಲಿವೆ’’ ಎಂದು ಮಾಧ್ಯಮ ಪ್ರಕಟನೆ ತಿಳಿಸಿದೆ. 12, 14, 16 ಹಾಗೂ 18 ವರ್ಷದೊಳಗಿನ ವಿಭಾಗದ ಆಟಗಾರರಿಗೆ ತರಬೇತಿ ನೀಡಲು ಒಂದು ಅಥವಾ ಎರಡು ವಾರಗಳ ಶಿಬಿರಕ್ಕೆ ಸರ್ಬಿಯದಿಂದ ತರಬೇತುದಾರರು ಭಾರತಕ್ಕೆ ಆಗಮಿಸಲಿದ್ದಾರೆ. ಸರ್ಬಿಯದಲ್ಲಿ 8-10 ಆಟಗಾರರಿಗೆ ಎರಡು ವಾರಗಳ ಜಂಟಿ ಸಿದ್ಧತಾ ಶಿಬಿರವು ನಡೆಯಲಿದ್ದು, ಇದನ್ನು 15-18 ವರ್ಷದೊಳಗಿನ ಆಟಗಾರರಿಗೆ ಆಯೋಜಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News