ಕೆಕೆಆರ್ ತಂಡಕ್ಕೆ ‘ಯಾರ್ಕರ್ ಸ್ಪೆಷಲಿಸ್ಟ್’ ಕೆಲ್ಲಿ

Update: 2019-04-12 03:10 GMT

ಕೋಲ್ಕತಾ, ಎ.11: ಕೋಲ್ಕತಾ ನೈಟ್ ರೈಡರ್ಸ್ ತಂಡ ಐಪಿಎಲ್‌ನ ಉಳಿದ ಪಂದ್ಯಗಳಿಗೆ ಆಸ್ಟ್ರೇಲಿಯದ ವೇಗದ ಬೌಲರ್, ಱಯಾರ್ಕರ್ ಸ್ಪೆಷಲಿಸ್ಟ್‌ೞಮ್ಯಾಟ್ ಕೆಲ್ಲಿಯವರನ್ನು ತನ್ನ ಬಳಗಕ್ಕೆ ಸೇರಿಸಿಕೊಂಡಿದೆ.

24ರ ಹರೆಯದ ಕೆಲ್ಲಿ ಅವರು ಅನ್ರಿಚ್ ನಾರ್ಟ್ಚೆೆ ಬದಲಿಗೆ ತಂಡಕ್ಕೆ ಆಯ್ಕೆಯಾಗಿದ್ದಾರೆ. ದಕ್ಷಿಣ ಆಫ್ರಿಕದ ವೇಗದ ಬೌಲರ್ ಅನ್ರಿಚ್ ಭುಜನೋವಿನಿಂದಾಗಿ ಈ ವರ್ಷದ ಐಪಿಎಲ್ ಟೂರ್ನಿ ಆರಂಭವಾಗುವ ಮೊದಲೇ ಅಲಭ್ಯರಾಗಿದ್ದರು. ಬಿಗ್‌ಬ್ಯಾಶ್ ಲೀಗ್ ಟಿ-20 ಟೂರ್ನಿಯಲ್ಲಿ ಪರ್ತ್ ಸ್ಕಾಚರ್ಸ್ ಪರ ಅತ್ಯುತ್ತಮ ಪ್ರದರ್ಶನ ನೀಡಿ ಗಮನ ಸೆಳೆದಿದ್ದ ಕೆಲ್ಲಿ ಡೆತ್ ಓವರ್‌ನಲ್ಲಿ ಯಾರ್ಕರ್ ಎಸೆತದ ಮೂಲಕ ಎದುರಾಳಿಯನ್ನು ಕಾಡುವುದರಲ್ಲಿ ಹೆಸರುವಾಸಿಯಾಗಿದ್ದಾರೆ.

ಯುವ ವೇಗಿ ಕೆಲ್ಲಿ 16 ಪ್ರಥಮ ದರ್ಜೆ ಪಂದ್ಯಗಳು, 5 ಲಿಸ್ಟ್ ಎ ಹಾಗೂ 12 ಟ್ವೆಂಟಿ-20 ಪಂದ್ಯಗಳನ್ನು ಆಡಿದ್ದಾರೆ. ಬಿಬಿಎಲ್‌ನಲ್ಲಿ 7 ಪಂದ್ಯಗಳನ್ನು ಆಡಿದ್ದ ಅವರು ಒಟ್ಟು 11 ವಿಕೆಟ್‌ಗಳನ್ನು ಕಬಳಿಸಿದ್ದರು. ಕೆಕೆಆರ್ ಪ್ರಸ್ತುತ ಐಪಿಎಲ್ ಅಂಕಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದೆ. ಈ ತಂಡ ಬೌಲಿಂಗ್ ವಿಭಾಗದಲ್ಲಿ ಈಗಾಗಲೇ ಸಾಕಷ್ಟು ಗಾಯದ ಸಮಸ್ಯೆಯನ್ನು ಎದುರಿಸಿದೆ. ಅನ್ರಿಚ್‌ರಲ್ಲದೆ ವೇಗದ ಬೌಲರ್ ಕಮಲೇಶ್ ನಾಗರಕೋಟಿ ಹಾಗೂ ಶಿವಂ ಮಾವಿ ಸೇವೆಯಿಂದ ವಂಚಿತವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News