ಸ್ಪೇನ್ ಫುಟ್ಬಾಲಿಗ ಕೋಸ್ಟಾಗೆ 8 ಪಂದ್ಯ ನಿಷೇಧ

Update: 2019-04-12 03:12 GMT

ಮ್ಯಾಡ್ರಿಡ್, ಎ.11: ಪಂದ್ಯದ ರೆಫರಿಯೊಂದಿಗೆ ಅನುಚಿತ ವರ್ತನೆ ತೋರಿದ ಹಿನ್ನೆಲೆಯಲ್ಲಿ ಸ್ಪೇನ್ ರಾಷ್ಟ್ರೀಯ ತಂಡದ ಹಾಗೂ ಲೀಗ್ ತಂಡ ಅಟ್ಲೆಟಿಕೊ ಮ್ಯಾಡ್ರಿಡ್ ಆಟಗಾರ ಡಿಗೊ ಕೋಸ್ಟಾ ಗುರುವಾರ ಸ್ಪಾನಿಶ್ ಫುಟ್ಬಾಲ್ ಒಕ್ಕೂಟದಿಂದ ಅಮಾನತುಗೊಂಡಿದ್ದಾರೆ. ಅವರಿಗೆ 8 ಪಂದ್ಯಗಳ ನಿಷೇಧ ಶಿಕ್ಷೆ ವಿಧಿಸಿರುವುದರಿಂದ ಈ ಋತುವಿನ ಲಾಲಿಗ ಟೂರ್ನಿಯ ಎಲ್ಲ ಪಂದ್ಯಗಳನ್ನು ಅವರು ಆಡುವುದಿಲ್ಲ. ಶನಿವಾರ ಬಾರ್ಸಿಲೋನಾ ತಂಡದ ವಿರುದ್ಧ ನಡೆದ ಪಂದ್ಯದಲ್ಲಿ ರೆಫರಿ ಗಿಲ್ ಮಾಂಝನೊ ಅವರಿಗೆ ಕೋಸ್ಟಾ ಅಶ್ಲೀಲ ಪದಗಳಿಂದ ನಿಂದಿಸಿದ್ದು ಪ್ರಥಮಾರ್ಧದ ವೇಳೆಗೆ ಅವರನ್ನು ಪಂದ್ಯದಿಂದ ಹೊರಕಳಿಸಲಾಗಿತ್ತು. ‘‘ಘಟನೆಯಲ್ಲಿ ಕೋಸ್ಟಾ ಮಾಡಿದ ತಪ್ಪಿಗೆ ಕಾರ್ಡ್‌ಗಳನ್ನು ತೋರಿಸಲು ಸಾಧ್ಯವಾಗದಂತೆ ಆತ ನನ್ನ ಕೈಗಳನ್ನು ಗಟ್ಟಿಯಾಗಿ ಹಿಡಿದುಕೊಂಡಿದ್ದರು ಬಳಿಕ ತನ್ನ ತಾಯಿಯನ್ನು ಅಶ್ಲೀಲ ಪದಗಳಿಂದ ನಿಂದಿಸಿದರು’’ಎಂದು ಮಾಂಝನೊ ಆರೋಪ ಮಾಡಿದ್ದರು. ಈ ಸುದೀರ್ಘ ನಿಷೇಧದ ಕಾರಣ ಈ ಋತುವಿನಲ್ಲಿ ಅಟ್ಲೆಟಿಕೊ ತಂಡ ಆಡುವ ಎಲ್ಲ ಏಳು ಪಂದ್ಯಗಳಿಂದ ಕೋಸ್ಟಾ ಹೊರಗುಳಿಯ ಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News