ರೊನಾಲ್ಡೊರನ್ನು ಹಿಂಬಾಲಿಸಿ

Update: 2019-04-12 03:13 GMT

ಹೊಸದಿಲ್ಲಿ, ಎ.11: ಲಿಯೊನೆಲ್ ಮೆಸ್ಸಿ ದೇವರು ಕೊಟ್ಟ ಕೊಡುಗೆ. ಸಮಯ ಹಾಗೂ ವಯಸ್ಸಿಗೆ ತಕ್ಕಂತೆ ಬೆಳೆಯುತ್ತಿರುವ ಕ್ರಿಸ್ಟಿಯಾನೊ ರೊನಾಲ್ಡೊ ಓರ್ವ ಅದ್ಭುತ ಆಟಗಾರ ಎಂದು ಭಾರತದ ನಾಯಕ ಸುನೀಲ್ ಚೆಟ್ರಿ ಅಭಿಪ್ರಾಯಪಟ್ಟರು.

 ಸುನೀಲ್ ಚೆಟ್ರಿ ಅವರು ಲಿಯೊನೆಲ್ ಮೆಸ್ಸಿ ಅವರ ಅಭಿಮಾನಿ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಯಾವುದೇ ಫುಟ್ಬಾಲ್ ಆಟಗಾರನ ಹಿಂಬಾಲಕನಾಗಲು ಬಯಸಿದರೆ ಕ್ರಿಸ್ಟಿಯಾನೊ ರೊನಾಲ್ಡೊರನ್ನು ಆಯ್ಕೆ ಮಾಡಿಕೊಳ್ಳಬೇಕೆಂದು ಚೆಟ್ರಿ ಸಲಹೆ ನೀಡಿದರು.

 ಲಿಯೊನೆಲ್ ಮಸ್ಸಿ ಹಾಗೂ ರೊನಾಲ್ಡೊ ಪೈಕಿ ಯಾರು ಶ್ರೇಷ್ಠರು ಯಾರೆಂಬ ವಿಚಾರ ವಿಶ್ವದಾದ್ಯಂತ ಚರ್ಚೆಯ ವಿಷಯವಾಗಿದೆ. ಈ ವಿಷಯಕ್ಕೆ ಸಂಬಂಧಿಸಿ ಜನರು ತಮ್ಮದೇ ಅಭಿಪ್ರಾಯ ಮಂಡಿಸಿದ್ದಾರೆ.

‘‘ನನ್ನ ಪ್ರಕಾರ ಮೆಸ್ಸಿ ಹಾಗೂ ರೊನಾಲ್ಡೊ ಇಬ್ಬರೂ ಉತ್ತಮ ಆಟಗಾರರು. ನನ್ನ ಬಳಿ ನಿಮ್ಮ ಫೇವರಿಟ್ ಆಟಗಾರ ಯಾರು ಎಂದು ಕೇಳಿದರೆ, ಮೆಸ್ಸಿ ಎಂದು ಹೇಳಬಲ್ಲೆ. ನಿಮಗೆ ರೋಲ್ ಮಾಡಲ್ ಅಗತ್ಯವಿದ್ದರೆ, ರೊನಾಲ್ಡೊರನ್ನು ಆಯ್ಕೆ ಮಾಡುವುದು ಉತ್ತಮ’’ ಎಂದು ಚೆಟ್ರಿ ಹೇಳಿದ್ದಾರೆ.

‘‘ಮೆಸ್ಸಿ ದೇವರು ಕೊಟ್ಟ ಉಡುಗೊರೆ. ಅವರ ಕೆಲವು ವಿಚಾರವನ್ನು ಕಲಿಯುವುದು ತುಂಬಾ ಕಷ್ಟಕರ. ರೊನಾಲ್ಡೊರಂತೆಯೇ ಕಠಿಣಶ್ರಮಪಟ್ಟರೆ ಪ್ರತಿವರ್ಷ ಪ್ರಗತಿಯಾಗಬಹುದು’’ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News