ಮಕಾವು ಓಪನ್ ಸ್ಕ್ವಾಷ್: ಜೋಶ್ನಾ ಸೆಮಿ ಫೈನಲ್ ಗೆ

Update: 2019-04-12 18:48 GMT

ಮಕಾವು, ಎ.12: ಮೂರನೇ ಶ್ರೇಯಾಂಕದ ಜೋಶ್ನಾ ಚಿನ್ನಪ್ಪ ಮಕಾವು ಓಪನ್ ಸ್ಕ್ವಾಷ್ ಟೂರ್ನಿಯಲ್ಲಿ ಸೆಮಿ ಫೈನಲ್‌ಗೆ ಲಗ್ಗೆ ಇಟ್ಟಿದ್ದಾರೆ.

ಇಲ್ಲಿ ಶುಕ್ರವಾರನಡೆದ ಮಹಿಳೆಯರ ಸಿಂಗಲ್ಸ್ ನ ಕ್ವಾರ್ಟರ್ ಫೈನಲ್‌ನಲ್ಲಿ ಜೋಶ್ನಾ ಈಜಿಪ್ಟ್‌ನ 5ನೇ ಶ್ರೇಯಾಂಕದ ಮಯರ್ ಹ್ಯಾನಿ ಅವರನ್ನು 11-8, 11-2, 11-9 ಅಂತರದಿಂದ ಮಣಿಸಿದರು.

ಪುರುಷರ ಸಿಂಗಲ್ಸ್‌ನಲ್ಲಿ ಎರಡನೇ ಶ್ರೇಯಾಂಕದ ಸೌರವ್ ಘೋಷಾಲ್ ಸ್ಕಾಟ್ಲೆಂಡ್‌ನ ಗ್ರೆಗ್ ಲೊಬ್ಬನ್‌ರನ್ನು 6-11, 11-8, 11-5, 11-8 ಅಂತರದಿಂದ ಶರಣಾಗಿ ಟೂರ್ನಿಯಿಂದ ನಿರ್ಗಮಿಸಿದರು.

ಇದಕ್ಕೂ ಮೊದಲು ನಡೆದ ಎರಡನೇ ಸುತ್ತಿನ ಪಂದ್ಯದಲ್ಲಿ ಘೋಷಾಲ್ ಸಹ ಆಟಗಾರ ಮಹೇಶ್ ಮಂಗಾಂವ್ಕರ್‌ರನ್ನು 9-11, 11-7, 10-12, 11-2, 11-9 ಅಂತರದಿಂದ ಸೋಲಿಸಿದ್ದಾರೆ.

ಮೊದಲ ಸುತ್ತಿನಲ್ಲಿ ಬೈ ಪಡೆದಿದ್ದ ಜೋಶ್ನಾ ಎರಡನೇ ಸುತ್ತಿನಲ್ಲಿ ನ್ಯೂಝಿಲ್ಯಾಂಡ್‌ನ ಅಮಂಡಾ ಲ್ಯಾಂಡರ್ಸ್-ಮುರ್ಫಿ ಅವರನ್ನು 11-5, 11-8, 11-9 ಅಂತರದಿಂದ ಮಣಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News