ಮೋದಿ ಅನಿಲ್ ಅಂಬಾನಿಯ ‘ಮಧ್ಯವರ್ತಿ’ : ಕಾಂಗ್ರೆಸ್ ಟೀಕೆ

Update: 2019-04-13 18:32 GMT

ಹೊಸದಿಲ್ಲಿ,ಎ.13: ಅನಿಲ್ ಅಂಬಾನಿ ಒಡೆತನದ ‘ರಿಲಾಯನ್ಸ್ ಫ್ಲಾಗ್ ಫ್ರಾನ್ಸ್ ಪಾವತಿಸಬೇಕಾಗಿದ್ದ 1125 ಕೋಟಿ ರೂ.ಮೌಲ್ಯದ ಬಾಕಿ ತೆರಿಗೆಯನ್ನು ಫ್ರೆಂಚ್ ಸರಕಾರ ಮನ್ನಾ ಮಾಡಿತ್ತೆಂದು ‘ಲೆ ಮೊಂಡೆ’ ಪತ್ರಿಕೆ ಪ್ರಕಟಿಸಿದ ವರದಿಯು ಕಾಂಗ್ರೆಸ್‌ಗೆ ರಫೇಲ್ ಒಪ್ಪಂದಕ್ಕೆ ಸಂಬಂಧಿಸಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಹೊಸ ಟೀಕಾಸ್ತ್ರವನ್ನು ಒದಗಿಸಿದೆ.

ರಫೇಲ್ ಒಪ್ಪಂದದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಅನಿಲ್ ಅಂಬಾನಿಯವರ ಮಧ್ಯವರ್ತಿಯಂತೆ ವರ್ತಿಸಿದ್ದಾರೆಂದು ಕಾಂಗ್ರೆಸ್ ಪಕ್ಷ ಶನಿವಾರ ಆಪಾದಿಸಿದೆ.

‘‘ಪ್ರಧಾನಿ ನರೇಂದ್ರ ಮೋದಿಯವರು ಅನಿಲ್ ಅಂಬಾನಿಯವರ ಮಧ್ಯಮವರ್ತಿಯಾಗಿದ್ದಾರೆ. ಫ್ರಾನ್ಸ್‌ನಲ್ಲಿರುವ ಇನ್ನೆಷ್ಟು ಕಂಪೆನಿಗಳು ತೆರಿಗೆ ರಿಯಾಯಿತ ಸೌಲಭ್ಯವನ್ನು ಪಡೆದುಕೊಂಡಿವೆ?. ರಫೇಲ್ ವಿಮಾನ ಖರೀದಿಗಾಗಿ ಏರ್ಪಟ್ಟ ಕೊಡುಕೊಳ್ಳುವಿಕೆ ಇದಲ್ಲವೇನು?. ಕೇವಲ ಒಬ್ಬ ಚೌಕೀದಾರ ಚೋರನೆಂದು ಇದರಿಂದ ಸಾಬೀತಾಗಿದೆ’’ ಎಂದು ಕಾಂಗ್ರೆಸ್ ವಕ್ತಾರ ರಣದೀಪ್ ಸುರ್ಜೆವಾಲ ಕಟಕಿಯಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News