ಬಾಲಕೋಟ್ ವಾಯು ದಾಳಿ ಬಳಿಕ ಪಾಕ್‌ನಿಂದ 500 ಬಾರಿ ಕದನ ವಿರಾಮ ಉಲ್ಲಂಘನೆ: ಭಾರತೀಯ ಸೇನೆ

Update: 2019-04-14 15:41 GMT

ರಾಜೌರಿ, ಎ. 14: ಬಾಲಕೋಟ್‌ನಲ್ಲಿ ಭಾರತೀಯ ವಾಯು ಪಡೆ ವಾಯು ದಾಳಿ ನಡೆಸಿದ ಬಳಿಕ ಜಮ್ಮು ಹಾಗೂ ಕಾಶ್ಮೀರದ ಗಡಿ ನಿಯಂತ್ರಣ ರೇಖೆಯಲ್ಲಿ ಪಾಕಿಸ್ತಾನ ಸೇನೆ 513 ಬಾರಿ ಕದನ ವಿರಾಮ ಉಲ್ಲಂಘಿಸಿದೆ ಎಂದು ಭಾರತೀಯ ಸೇನೆ ಶನಿವಾರ ಹೇಳಿದೆ.

  ಗಡಿಯಲ್ಲಿ ಪಾಕಿಸ್ತಾನ ಸೇನೆ ಮೋರ್ಟಾರ್ ಹಾಗೂ ಪಿರಂಗಿ ಗನ್‌ನಂತಹ ಆಯುಧಗಳನ್ನು ಬಳಸಿಕೊಂಡು ಈ ಅವಧಿಯಲ್ಲಿ 100 ಬಾರಿ ದಾಳಿ ನಡೆಸಿದೆ ಎಂದು ಸೇನೆ ತಿಳಿಸಿದೆ.

   ಕಳೆದ ಒಂದೂವರೆ ತಿಂಗಳಲ್ಲಿ ಪಾಕಿಸ್ತಾನ ಸೇನೆ ಗಡಿ ನಿಯಂತ್ರಣ ರೇಖೆಯಲ್ಲಿ 513 ಬಾರಿ ಕದನ ವಿರಾಮ ಉಲ್ಲಂಘಿಸಿದೆ. ಈ ಉಲ್ಲಂಘನೆಯ ಸಂದರ್ಭ ಪಾಕಿಸ್ತಾನ ಸೇನೆ ಭಾರೀ ಶಸ್ತ್ರಾಸ್ತ್ರಗಳನ್ನು 100ಕ್ಕೂ ಅಧಿಕ ಬಾರಿ ಬಳಸಿದೆ ಎಂದು ಸಿಒಸಿ16 ಕಾರ್ಪ್ಸ್‌ನ ಲೆಫ್ಟಿನೆಂಟ್ ಜನರಲ್ ಪ್ರೇಮ್‌ಜಿ ಸಿಂಗ್ ತಿಳಿಸಿದ್ದಾರೆ.

 ಪಾಕಿಸ್ತಾನ ಇಂತಹ ಉಲ್ಲಂಘನೆ ನಡೆಸಿದಾಗ, ಭಾರತ ಪರಿಣಾಮಕಾರಿಯಾಗಿ ಪ್ರತಿ ದಾಳಿ ನಡೆಸಿದೆ ಎಂದು ಸಿಂಗ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News