ವಾಂಖೆಡೆ ಕ್ರೀಡಾಂಗಣಕ್ಕೆ ಭದ್ರತಾ ಭೀತಿಯಿಲ್ಲ: ಮುಂಬೈ ಪೊಲೀಸ್

Update: 2019-04-15 01:44 GMT

ಮುಂಬೈ, ಎ.14: ಐಪಿಎಲ್ ಪಂದ್ಯಗಳು ನಡೆಯುತ್ತಿರುವ ಸಂದರ್ಭದಲ್ಲಿ ದಕ್ಷಿಣ ಮುಂಬೈನಲ್ಲಿರುವ ವಾಂಖೆಡೆ ಕ್ರೀಡಾಂಗಣಕ್ಕೆ ಯಾವುದೇ ಭದ್ರತಾ ಅಪಾಯವಿಲ್ಲ ಎಂದು ಶನಿವಾರ ಮುಂಬೈ ಪೊಲೀಸರು ಸ್ಪಷ್ಟಪಡಿಸಿದ್ದಾರೆ. ಕ್ರೀಡಾಂಗಣಕ್ಕೆ ಅಪಾಯವಿದೆಯೆಂದು ಶುಕ್ರವಾರದಿಂದ ‘‘ಸುಳ್ಳು ಸುದ್ದಿ’’ ಹರಿದಾಡುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ‘‘ ಈ ವಿಷಯ ಕುರಿತಂತೆ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯಲಿರುವ ಐಪಿಎಲ್ ಪಂದ್ಯಗಳಿಗೆ ಯಾವುದೇ ವಿಶೇಷ ಗುಪ್ತಚರ ದಳವನ್ನು ನಿಯೋಜಿಸುವುದಿಲ್ಲ’’ ಎಂದು ಇದೇ ವೇಳೆ ಮುಂಬೈ ಪೊಲೀಸ್ ವಕ್ತಾರ ಡಿಸಿಪಿ ಮಂಜುನಾಥ್ ಸಿಂೆ ಹೇಳಿದ್ದಾರೆ.

ನಗರವನ್ನು ಸುರಕ್ಷಿತವಾಗಿಡಲು ಮುಂಬೈ ಪೊಲೀಸ್ ಸಾಧ್ಯವಾದ ಗರಿಷ್ಠ ಭದ್ರತಾ ವ್ಯವಸ್ಥೆಯನ್ನು ಕೈಗೊಳ್ಳುತ್ತದೆ ಹಾಗೂ ಮುಂದೆಯೂ ಕೈಗೊಳ್ಳಲಿದೆ ಎಂದು ಅವರು ತಿಳಿಸಿದರು. ಗಾಳಿಸುದ್ದಿ ಹಾಗೂ ಸುಳ್ಳು ಸುದ್ದಿಗಳನ್ನು ನಂಬಬಾರದು ಎಂದು ಜನರಿಗೆ ಪೊಲೀಸರು ಮನವಿ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News